ಕಳೆದು ಹೋಗಿರುವ ಶಾಸಕರನ್ನು ಹುಡುಕಿಕೊಡಬೇಕೆಂದು ಜಾಹಿರಾತು ಕೊಡಬೇಕಾಗುತ್ತದೆ: ಅಗಿಲೆ ಯೋಗಿಶ್

ಹಾಸನ: ತಕ್ಷಣ ಹಾಸನಕ್ಕೆ ಬಂದು ಜನರಿಗೆ ಧೈರ್ಯ ಹೇಳದಿದ್ದರೇ ಕಳೆದು ಹೋಗಿರುವ ಶಾಸಕರನ್ನು ಹುಡುಕಿಕೊಡಬೇಕೆಂದು ಜಾಹಿರಾತು ಕೊಡಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡರಾದ ಅಗಿಲೆ ಯೋಗಿಶ್ ವ್ಯಂಗ್ಯವಾಡಿದರು.


       ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹಾಸನದಲ್ಲಿ ಜಿಲ್ಲಾ ಸರ್ಜನ್ ಆಗಿ ಉತ್ತಮವಾಗಿ ಸೇವೆ ಮಾಡುತ್ತಿದ್ದವರನ್ನು ಸೇವೆಯಿಂದ ವರ್ಗಾವಣೆ ಮಾಡಲಾಗಿತ್ತು. ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಸರಕಾರದ ಮೇಲೆ ಒತ್ತಡವನ್ನಾಕಿ ವರ್ಗಾವಣೆಯನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾದರು. ಕ್ಷೇತ್ರದ ಶಾಸಕರಾದ ಕೊರೋನ ಆಗಿದೆ ಎಂದು ಹೇಳಿ ಬೆಂಗಳೂರಿನಲ್ಲಿ ಕುಳಿತಿದ್ದಾರೆ. ಜನಪರ ಕೆಲಸ ಮಾಡುವುದಕ್ಕೂ, ವ್ಯಾಪಾರ ಮಾಡುವುದಕ್ಕೂ ವ್ಯತ್ಯಾಸವಿದೆ. ೭೫ ವರ್ಷ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೂ ಕೊರೋನಾ ಬಂದಿದೆ. ಜನರಿಗೆ ತೊಂದರೆ ಆಗಬಾರದು ಎಂದು ತುಂಬ ತಲೆ ಕೆಡಿಸಿಕೊಂಡು ಕೆಲಸ ಮಾಡಿದ್ದಾರೆ. ೩೯ ವರ್ಷದ ಶಾಸಕರು ೭೫ ವರ್ಷದವರಿಗಿಂತ ಹಿರಿಯರಾಗಿದ್ದಾರಾ, ಕೊರೋನಾ ಇರುವ ಈ ಸಮಯದಲ್ಲಿ ಒಬ್ಬ ದಕ್ಷ ಅಧಿಕಾರಿ ಸರ್ಜನನ್ನು ಬದಲಾವಣೆ ಮಾಡಿದ್ದಾರೆ. ಈ ಬಗ್ಗೆ ನಿಂತು ಪ್ರತಿಕ್ರಿಯೆ ನೀಡಿ ವರ್ಗಾವನ್ನು ರದ್ದು ಮಾಡಿಸಬೇಕಾಗಿತ್ತು. ಇದನ್ನು ಮಾಡದೇ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವುದಾಗಿ ದೂರಿದರು. ಜಿಲ್ಲಾಡಳಿತ, ಆರೋಗ್ಯಾಧಿಕಾರಿಗಳೆಲ್ಲಾ ಸೇರಿ ಕೊರೋನಾ ವಿಚಾರದಲ್ಲಿ ಸಮರ್ಥವಾಗಿ ನಿಬಾಯಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಕ್ಷೇತ್ರದ ಶಾಸಕರು ತಕ್ಷಣ ಹಾಸನಕ್ಕೆ ಬಂದು ಜನರಿಗೆ ಧೈರ್ಯ ಹೇಳದಿದ್ದರೇ ಕಳೆದು ಹೋಗಿರುವ ಶಾಸಕರನ್ನು ಹುಡುಕಿಕೊಡಬೇಕೆಂದು ಜಾಹಿರಾತು ಕೊಡಬೇಕಾಗುತ್ತದೆ ಎಂದರು. ರೆಮಿಡಿಸಿವರ್ ಮೆಡಿಸನ್ ಅಬಾವದಿಂದ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅವರದೆ ಸರಕಾರ ಇರುವ ಶಾಸಕರು ಖುದ್ಧಾಗಿ ಒತ್ತಡ ತಂದು ಜನರ ಬಗ್ಗೆ ಕಾಳಜಿವಹಿಸಬೇಕು ಎಂದು ಒತ್ತಾಯಿಸಿದರು. ತಕ್ಷಣ ಕಾರ್ಯಾನ್ಮುಖರಾಗದಿದ್ದರೇ ಜೆಡಿಎಸ್ ಕಾರ್ಯಕರ್ತರು ಎಲ್ಲಾ ಸೇರಿ ಶಾಸಕರು ಎಲ್ಲೆ ಕಾರ್ಯಕ್ರಮ ಮಾಡಿದರೇ ಅಲ್ಲಿ ಎಚ ಎಚ್ಚರಿಸುವ ಕೆಲಸ ಮಾಡಲಾಗುವುದು. ಲಾಕ್ ಡೌನ್ ಆದೇಶದಿಂದ ಬಡವರು ದಿನಗೂಲಿ ಮಾಡದೆ ಒಮದು ಹೊತ್ತು ಊಟಕ್ಕು ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿಗಳು ಗಮನವಹಿಸಿ ಅಂತಹ ಬಡವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರಕಾರದ ಗಮನಸೆಳೆಯುವಂತೆ ಮನವಿ ಮಾಡಿದರು. 

        ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಅಭಿ, ಅನಿಫ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post