ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗಳನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸೇರಿಸಿ : ಶಿವಲಿಂಗೇಗೌಡ
0
ಇಂದು ಅರಸೀಕೆರೆ ತಾಲ್ಲೂಕಿನ ಶಾಸಕರಾದ ಶ್ರೀಯುತ ಕೆ ಎಂ ಶಿವಲಿಂಗೇಗೌಡರು ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಸನ ಜಿಲ್ಲಾ ವೈದ್ಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಆಸ್ಪತ್ರೆಯ ಆಗುಹೋಗುಗಳ ಬಗ್ಗೆ ವಿಚಾರಿಸಿದರು ಹಾಗೇಯೆ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆ ಚರ್ಚಿಸಿದರು ಹಾಗೇಯೆ ಕೋವಿಡ್ ಪರೀಕ್ಷೆಗೆ ಆಗಮಿಸಿದ ಜನಗಳಿಗೆ ಯಾವುದೇ ತೊಂದರೆ ಆಗದ ರೀತಿ ನೋಡಿಕೊಳ್ಳುವಂತೆ ಆದಷ್ಟೂ ಬೇಗ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನು ಕಲ್ಪಿಸಿಕೊಂಡುವುದಾಗಿ ತಿಳಿಸಿದರು ಹಾಗೇಯೆ ಆಸ್ಪತ್ರೆಯ ಆವರಣವನ್ನುಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ತಿಳಿಸಿದರು ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗಳನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸೇರಿಸುವಂತೆ ಹೇಳಿದರು ಜನರಿಗೆ ಯಾವುದೇ ಆತಂಕ ಬೇಡ ನಿಮ್ಮ ಜೊತೆ ಸದಾ ನಾವು ಇದ್ದೇವೆ ಯಾವುದೇ ತೊಂದರೆ ಇದ್ದರೂ ನನ್ನಗೆ ತಿಳಿಸಿ ಎಂದರು