ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನ ಸರಳವಾಗಿ ಆಚರಿಸಲಾಯಿತು

 


ಹಗರೆ ಪ್ರಾ ಆ ಕೇಂದ್ರ ಇಲ್ಲಿ ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಸರಳ ಮತ್ತು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಮತ್ತು ಹಳ್ಳಿ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರ ಸೇವೆಯನ್ನು ಶ್ಲಾಘಿಸಿದ ವೈದ್ಯಾಧಿಕಾರಿ ಡಾ.ಶಾಲಿನಿ.ವಿ.ಎಲ್‌ ಈ ಸಮಯದಲ್ಲಿ ಮರಣಹೊಂದಿದ ಶುಶ್ರೂಷಕಿಯರಿಗೆ ಸಂತಾಪ ಸೂಚಿಸಿದರು. ಶುಶ್ರೂಷಕಿ ಪ್ರವಿತ್ರ. ಡಿ.ಬಿ ನರ್ಸಸ್‌ ಡೇ ವಿಶೇಷತೆ ಮತ್ತು ನೈಟಿಂಗೇಲ್‌ರವರ ವ್ಯಕ್ತಿ ಪರಿಚಯ ಮಾಡಿದರು. ನಂತರ ಎಲ್ಲಾ ಶುಶ್ರೂಷಕಿಯರು ಕ್ಯಾಂಡಲ್‌ ಬೆಳಗಿಸಿ ನೈಟಿಂಗೇಲ್‌ರವರಿಗೆ ಗೌರವ ಸಲ್ಲಿಸಿದರು. ನಮ್ಮ ಸುರಕ್ಷತೆಗೆ ಗಮನಹರಿಸಿ ರೋಗಿಗಳಿಗೆ ನಿರಂತರ ಸೇವೆಗೈಯ್ಯುವ ಪ್ರಮಾಣವಚನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮದಲ್ಲಿ ಆಯುಷ್‌ ವೈದ್ಯರಾದ ಡಾ. ಚೇತನ್‌ಕುಮಾರ್‌ ಮತ್ತು ಎಲ್ಲಾ ಸಿಬ್ಬಂಧಿ ಭಾಗವಹಿಸಿದ್ದರು

Post a Comment

Previous Post Next Post