ಜಿಲ್ಲೆಯಲ್ಲಿ ಮೇ 12. ರಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಪ್ರಾರಂಭ

ಹಾಸನ ಮೇ.11 (ಕರ್ನಾಟಕ ವಾರ್ತೆ):-ಎಪಿಎಂಸಿ ಪ್ರಾಂಗಣದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಉದ್ದೇಶಕಾಗಿ ಆಲೂಗಡ್ಡೆಯನ್ನು ಮೇ 12 ರಿಂದ ಮಾರಾಟ ಮಾಡಲು ತಿರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಂದು ನಡೆದ ತೋಟಗಾರಿಕೆ ಇಲಾಖೆ, ಕೃಷಿ ಮಾರುಕಟ್ಟೆ ಅಧಿಕಾರಿಗಳುಹಾಗೂ ಆಲೂಗಡ್ಡೆ ವರ್ತಕರ ಸಭೆಯಲ್ಲಿ ಈ ನಿರ್ದಾರ ಕೈಗೊಳ್ಳಲಾಗಿದೆ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರಸ್ತುತ ಕೋವಿಡ್ ಸರ್ಕಾರದ ಜಾರಿಯಲ್ಲಿರುವುದರಿಂದ ಲಾಕ್ ಡೌನ್ ಮಾರ್ಗಸೂಚಿ ನಿಯಮಾವಳಿಗಳ ಪ್ರಕಾರ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ವಿನಾಯಿತಿ ನೀಡಿದರೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ.
ಆದರೆ ರೈತರುಗಳು ಬೆಳಿಗ್ಗೆ 10 ಗಂಟೆಯೊಳಗೆ ಎ.ಪಿ.ಎಂ.ಸಿ ಗೆ ಬಂದು, ಆಲೂಗಡ್ಡೆಯನ್ನು ಖರೀದಿಸಬಹುದಾಗಿದೆ ಆಲೂಗಡ್ಡೆ ಸಾಗಾಣಿಕೆ ಮಾಡುವ ವಾಹನಗಳಿಗೆ ಯಾವುದೇ ನಿರ್ಭಂಧವಿರುವುದಿಲ್ಲ. ಖಾಲಿ ಹಾಗೂ ತುಂಬಿದ ಸಾಗಾಣಿಕೆ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿರುತ್ತದೆ, ವರ್ತಕರು ಹಾಗೂ ರೈತರುಗಳು ಕೊವಿಡ್ ಮಾರ್ಗಸೂಚಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎ.ಪಿ.ಎಂ.ಸಿ ಅಧಿಕಾರಿಗಳು ಮಾರುಕಟ್ಟೆ ಸಮಯದಲ್ಲಿ ಕೋವಿಡ್ ಮಾರ್ಗಸೂಚಿ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿರುವ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ತೋಟಗಾರಿಕೆ ಉಪನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ ಪ್ರಸಕ್ತ ಮುಂಗಾರು ಹಂಗಾಮಿಗೆ ಬಿತ್ತನೆ ಆಲೂಗಡ್ಡೆ ಮಾರಾಟ ದರ ರೂ.1600/-ಗಳಿಗೆ ಮೇ 30 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲೆಯ ಶಾಸಕರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆ ದರದಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಹಾಗೂ ಗುಣಮಟ್ಟದ ಆಲೂಗಡ್ಡೆಯನ್ನು ಮಾತ್ರ ಮಾರಾಟ ಮಾಡಲು ತಿಳಿಸುತ್ತಾ, ಈಗಾಗಲೇ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ, ಬೆಂಗಳೂರು, ಇಲ್ಲಿಂದ ಆಲೂಗಡ್ಡೆ ಮಾದರಿಗಳ ಗುಣಮಟ್ಟ ವರದಿಯು ಬಂದಿದ್ದು ಆ ಪ್ರಕಾರ ಮೂರು ಮಾದರಿಗಳ ಆಲೂಗಡ್ಡೆ ಕಳಪೆ ಗುಣಮಟ್ಟದ್ದಾಗಿದ್ದು, ಈ ಬಗ್ಗೆ ಶೀಥಲಗೃಹ ಮಾಲಿಕರಿಗೆ ಹಾಗೂ ಆಲೂಗಡ್ಡೆ ವರ್ತಕರಿಗೆ ಮಾಹಿತಿ ನೀಡಿದ್ದು, ಆ ಆಲೂಗಡ್ಡೆಯನ್ನು ಮಾರಾಟ ಮಾಡಬಾರದು ಎಂದರು.
ವರ್ತಕರ ಸಂಘದ ಪ್ರತಿನಿಧಿಗಳು ಮಾತನಾಡುತ್ತಾ ಸಮಯವನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿ ಮಾರುಕಟ್ಟೆ ಸರಾಗವಾಗಿ ನಡೆಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸುತ್ತಾ, ಕೋವಿಡ್ ಮಾರ್ಗಸೂಚಿ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 6 ರಿಂದ 10 ರವರೆಗೆ ನಡೆಸಲು ಮಾತ್ರ ಅವಕಾಶವಿರುವುದರಿಂದ ಆ ಪ್ರಕಾರವೇ ಮಾರುಕಟ್ಟೆ ನಡೆಸುವುದು ಹಾಗೂ ಮುಂದಿನ ದಿವಸಗಳಲ್ಲಿ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆಯಾದರೆ ಆ ಪ್ರಕಾರ ಮಾರುಕಟ್ಟೆ ನಡೆಸಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು.
ಸಭೆಯಲ್ಲಿ ಕೃಷಿ ಮಾರುಕಟ್ಟೆ ಉಪನಿರ್ದೇಶಕರಾದ ಶ್ರೀಹರಿ, ಹಾಸನ ಎ.ಪಿ.ಎಂ.ಸಿ., ಕಾರ್ಯದರ್ಶಿಗಳು ಹಾಗೂ ವರ್ತಕರ ಸಂಘದ ಅಧ್ಯಕ್ಷರಾದ ಈರುಳ್ಳಿ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
******* ದಲ್ಲಿ ಕೋವಿಡ್ ಮಾರ್ಗಸೂಚಿ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿರುವ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

Post a Comment

Previous Post Next Post