ಹಾಸನದಲ್ಲಿ ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ದೂರ ಊರುಗಳಿಂದ ಬಂದಂತಹ ರೋಗಿಗಳ ಸಂಬಂದಿಕರು ವಸತಿ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ, ಆಸ್ಪತ್ರೆಯ ಪಕ್ಕದಲ್ಲಿ ಮಲಗುತ್ತಿದ್ದನ್ನು ಗಮನಿಸಿ ರಾಷ್ಟ್ರೀಯ ಸ್ಪಯಂ ಸೇವಕ ಸಂಘ (RSS), ಶ್ರೀ ಜನಜಾಗರಣ ಟ್ರಸ್ಟ್ ರಿ., ಸೇವಾ ಭಾರತಿ, ವತಿಯಿಂದ ಉಚಿತವಾಗಿ ವಸತಿ ಸಹಿತ 3 ಹೊತ್ತು ಊಟ, 2 ಹೊತ್ತು ಕಶಾಯ, ಸ್ನಾನ-ಶೌಚಾಲಯ ವ್ಯವಸ್ಥೆ, ಕುಡಿಯಲು ಬಿಸಿನೀರು ವ್ಯವಸ್ಥೆಯ ಕೋವಿಡ್ ಸೇವಾ ಕೇಂದ್ರವನ್ನು ಹಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಫೀಸ್ ಕಟ್ಟಡದಲ್ಲಿ ದಿನಾಂಕ 01.06.2021 ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ಹಾಸನ ಜಿಲ್ಲಾಧಿಕಾರಿಗಳು, ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡ ಹಾಗೂ ಆರ್ ಎಸ್ ಎಸ್ ನ ವಿಭಾಗ ಕಾರ್ಯವಾಹ ಶ್ರೀ ವಿಜಯ್ ಕುಮಾರ್ ಅವರುಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.
Tags
ಹಾಸನ