ಅಮ್ಮ ಎಂದರೆ ಶಕ್ತಿ, ಸ್ಪೂರ್ತಿ. ಕುಟುಂಬದ ಪರಿಪೂರ್ಣತೆಯು ತಾಯಿಯ ಇರುವಿಕೆಯ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಅಮ್ಮನ ಪ್ರಭಾವ ತಾಳೆಗೆ ನಿಲುಕದ್ದು.
ನಿಸ್ವಾರ್ಥದ ಪ್ರೀತಿ, ಅಘಾದ ಕಾಳಜಿ, ಪರಿಪೂರ್ಣ ಆಶೀರ್ವಾದ ಇವುಗಳನ್ನು ಒಬ್ಬ ತಾಯಿ ಮಾತ್ರ ಕೊಡಲು ಸಾಧ್ಯ. ತಾಯಿ ತನ್ನ ಮಕ್ಕಳ ಮೇಲೆ ಇಡುವಷ್ಟು ನಂಬಿಕೆ, ವಿಶ್ವಾಸ ಪ್ರಪಂಚದಲ್ಲಿ ಬೇರೆ ಯಾರೂ ಯಾರ ಮೇಲೂ ಇಡಲು ಸಾಧ್ಯವಿಲ್ಲ ಎನಿಸುತ್ತದೆ. ಜಗದ ಮಾತೇ ಇರುವಂತೆ, "ಪ್ರಪಂಚದಲ್ಲಿ ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರಳು" ಎಂಬುದು ಸತ್ಯ ಎನಿಸುತ್ತದೆ. ಮುಖದಲ್ಲಿ ಹೆಮ್ಮೆಯ ನಗು ಅರಳಿಸುವ ಈ ಎಲ್ಲ ಸನ್ನಿವೇಶಗಳ ನಡುವೆಯೂ ಒಂದು ಆಘಾತಕಾರಿ ವಿಚಾರವೆಂದರೆ ಕಾಡೆಗಾಲದಲ್ಲಿ ಅದೇ ತಾಯಿಯ ತಿರಸ್ಕಾರ.
ಪ್ರಸ್ತುತ ದಿನಗಳಲ್ಲಿ ಮಕ್ಕಳಿಂದ ವಯಸ್ಸಾದ ತಂದೆ ತಾಯಿಯ ತಿರಸ್ಕಾರ ಹೆಚ್ಚುತ್ತಿದೆ. ಪ್ರತಿನಿತ್ಯ ಇಂತಹ ಪ್ರಸಂಗಗಳು ಕಣ್ಣಿಗೆ ಕಾಣಿಸುತ್ತಿವೆ. ವಿದ್ಯಾವಂತ ರಾಗಿರುವ ನಾವೂ ನೀವುಗಳು ಇಂತಹ ಶೋಚನೀಯ ವಿಚಾರಗಳ ಬಗೆಗೆ ಗಮನ ಹರಿಸಿ ಮುಂದೊಂದು ದಿನ ನಮಗೂ ವೃದ್ದಾಪ್ಯ ಬರುವುದಿದೆ, ನಮ್ಮ ನಿಮ್ಮ ಮಗಳಿಗೂ ವೃದ್ದಾಪ್ಯ ಎಂಬುದು ಇದ್ದೇ ಇದೆ ಎಂದು ಅರ್ಥೈಸಿಕೊಂಡು ಸಾಗಿದರೆ ಒಳಿತು.
ಇಂದು ಮೇ 9 ವಿಶ್ವ ತಾಯಂದಿರ ದಿನ. ತಾಯಂದಿರ ದಿನವನ್ನು ಯುವಜನತೆ ಕೇವಲ ಸೆಲ್ಫಿ, ಫೋಟೋ, ಸ್ಟೇಟಸ್, ಸ್ಟೋರಿ ಇವುಗಳೊಂದಿಗೆ ಆಚರಿಸಿ ಶುಭಕೋರುವ ಬದಲು, ಒತ್ತಡ ಜಂಜಾಟಗಳನ್ನು ಬದಿಗಿರಿಸಿ ತಮ್ಮ ತಮ್ಮ ತಾಯಿಗೆ ಒಂದಿಷ್ಟು ಸಮಯ ನೀಡಿ, ಅವರೊಟ್ಟಿಗೆ ಸಂತಸದಿಂದ ಸಮಯ ಕಳೆದರೆ ತಾಯಂದಿರ ದಿನವೂ ಸಾರ್ಥಕವಾಗುತ್ತದೆ ಎಂಬುದು ನನ್ನ ಅಭಿಪ್ರಾಯ.
ಕೊನೆ ಇಲ್ಲದ ಕಣ್ಣೀರಿನ ಮೇಲೆಯೇ
ಕನಸಿನ ಅರಮನೆ ಕಟ್ಟುವವಳು ನೀನು,
ಕಾಡೆಗಾಲದಲ್ಲಿ ಮಕ್ಕಳ ಆಶ್ರಯ ಇದೆಯೆಂದು
ತನಗಾಗಿ ಏನನ್ನು ಸಂಗ್ರಹಿಸದವಳು ನೀನು,
ಕಾಡು ಸುತ್ತಿ ಕಟ್ಟಿಗೆ ತಂದು
ಖಾದ್ಯ ಸಂಗ್ರಹಿಸುವವಳು ನೀನು,
ತನಗೆ ಕಡಿಮೆಯಾದರೂ ಸರಿಯೇ ಕಂದಮ್ಮಗಳಿಗೆ ಕಡಿಮೆಯಾಗಬಾರ ದೆನ್ನುವವಳು ನೀನು,
ಯನಗೆ ನೋವಾದರೂ ಅಡ್ಡಿಯಿಲ್ಲ
ತನ್ನವರಿಗೆ ನಗು ಬಯಸುವವಳು ನೀನು,
ನೀ ನೀರುಂಡು
ತನ್ನವರಿಗೆ ರುಚಿ ನೀಯುವವಳು ನೀನು,
ತನ್ನವರಿಗಾಗಿಯೇ ಸರ್ವಸ್ವವನ್ನೇ ತೇಯುವವಳು ನೀನು
ತಾಯೇ ಸರಿಸಾಟಿಯುಂಟೇ ಧರೆಯೊಳು ನಿನಗೆ.
ಎಲ್ಲರಿಗೂ ತಾಯಂದಿರ ದಿನಾಚರಣೆಯ ಶುಭಾಷಯಗಳು.
ಲೇಖನ:
ಶಶಿ ಎಂ.ಟಿ,ಮಂಡಲಮನೆ