ಹಾಸನ: ತಾಲೂಕಿನ ಸಾಲಗಾಮೆಯಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮುಂಜಾನೆ ಮಿತ್ರರು ತಂಡದಿAದ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆಯನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ವಿ. ಮಂಜುನಾಥ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸ್ವಚ್ಛತೆ ಎಂಬುದು ಪ್ರತಿಯೊಬ್ಬರಲ್ಲಿಯೂ ಮೊದಲು ಬರಬೇಕು. ನಮಗೆ ದೇಶ ಏನು ಕೊಟ್ಟಿದೆ ಎಂಬುದು ಮುಖ್ಯವಲ್ಲ. ನಾವು ದೇಶಕ್ಕೆ ಯಾವ ಕೊಡುಗೆ ನೀಡಿದ್ದೇವೆ ಬಗ್ಗೆ ನಾವೇ ಆತ್ಮವಲೋಕನ ಮಾಡಿಕೊಳ್ಳಬೇಕು. ಕೊರೋನಾ ಎಂದರೇ ಏನು ಎಂಬುದರ ಬಗ್ಗೆ ಮೊದಲು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು. ಹಳ್ಳಿಗಳಲ್ಲಿ ಕೊರೋನಾ ಎಂಬುದು ದಿನೆ ದಿನೆ ಹೆಚ್ಚು ಕಂಡು ಬರುತ್ತಿರುವುದರಿಂದ ಕೊರೋನಾ ನಿಯಂತ್ರಣಕ್ಕೆ ಮುಖ್ಯವಾಗಿ ಆಶಾ ಕಾರ್ಯಕರ್ತೆಯರ ಪಾತ್ರ ಹೆಚ್ಚು ಇದೆ. ಅವರ ಸೇವೆಯನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಕೇವಲ ಹಣದಿಂದ ಸೇವೆ ಕೊಡಲು ಸಾಧ್ಯವಿಲ್ಲ. ಒಳ್ಳೆ ಸೇವೆಯಂತಹ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿರುವುದಾಗಿ ಇದೆ ವೇಳೆ ಶ್ಲಾಘಿಸಿದರು.
ಮುಂಜಾನೆ ಮಿತ್ರರು ತಂಡದ ಅಧ್ಯಕ್ಷರಾದ ಸಿ.ಬಿ. ವೆಂಕಟೇಗೌಡ ಇವರು ಮಾತನಾಡಿ, ಕೊರೋನಾ ಎಂಬ ಸಂಕಟದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮತ್ತು ಅವರಿಗೆ ಧೈರ್ಯ ತುಂಬಿ ಮುಂಜಾಗೃತ ಕ್ರಮಕ್ಕೆ ಮನವೊಲಿಸುವ ಆಶಾ ಕಾರ್ಯಕರ್ತೆಯರಿಗೆ ನಾವು ಧನ್ಯವಾದಗಳನ್ನು ಹೇಳುತ್ತೇವೆ. ಈ ನಿಟ್ಟಿನಲ್ಲಿ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯಲ್ಲಿ ಸಮಾರು ೪೦ ಜನ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ. ಮುಂದೆ ತಾಲೂಕಿನ ಇತರೆ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ ಮಾಡುವುದಾಗಿ ಹೇಳಿದರು.
ಈಸಂದರ್ಭದಲ್ಲಿ ಮುಂಜಾನೆ ಮಿತ್ರ ತಂಡದ ಕಾರ್ಯದರ್ಶಿ ಎ.ಎಸ್. ಸುದೀರ್, ಖಜಾಂಚಿ ಹೆಚ್.ಟಿ. ರಾಮೇಗೌಡ, ಸದಸ್ಯರಾದ ನಮೃತ ಧನರಾಜ್, ಎಸ್.ಪಿ. ಯೋಗೀಶ್, ಎಸ್. ಜಗದೀಶ್, ಡಾ. ಪಾಟೀಲ್, ನಾಗೇಶ್, ಧನರಾಜ್, ಅಭಯ್, ವಿಜಯಕುಮಾರ್ ಇತರರು ಪಾಲ್ಗೊಂಡಿದ್ದರು.