ಬೇಲೂರಿನಲ್ಲಿ ರಾಹುಲ್ ಗಾಂಧಿ ಹುಟ್ಟು ಹಬ್ಬ ಆಚರಣೆ

ಬೇಲೂರು: ದೇಶದ ಘನತೆ, ಗೌರವ ಕಾಪಾಡಲು ಹಾಗೂ ಏಳಿಗೆ ಬಯಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದ್ದು, ನೆಹರು ಕುಟುಂಬ ದೇಶಕ್ಕಾಗಿ ಅವಿರತ ಶ್ರಮ ವಹಿಸಿ ತ್ಯಾಗ ಮಾಡಿದೆ ಎಂದು ಪುರಸಭೆ ಸದಸ್ಯೆ ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ಇಂದು ಸಮಾಜದ ಅಭಿವೃದ್ಧಿಗೆ ಯುವಕರ ಅವಶ್ಯಕತೆ ಇದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಶ್ರಮವಹಿಸಬೇಕು ಎಂದರು.

ದೇಶದಲ್ಲಿ ಬಿಜೆಪಿ ಸರ್ಕಾರ ಬೆಲೆ ಏರಿಕೆಯನ್ನು ಜನಸಾಮಾನ್ಯರ ಮೇಲೆ ಹೇರಿಕೆ ಮಾಡುವ ಮೂಲಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಹೋಗಲಾಡಿಸಲು ರಾಹುಲ್ ಗಾಂಧಿಯಂತ ಸಮರ್ಥ ನಾಯಕ ಬೇಕಾಗಿದ್ದು ಮುಂದೆ ದೇಶದ ಪ್ರಧಾನಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.

ನಗರ ಅಧ್ಯಕ್ಷೆ ಮುದ್ದಮ್ಮ, ಕಾರ್ಯದರ್ಶಿ ರೇಖಾ, ಪುರಸಭೆ ಸದಸ್ಯರಾದ ಸೌಮ್ಯ, ಉಷಾ, ರತ್ನ, ಮೀನಾಕ್ಷಿ, ಜಮೀಲಾ, ಫಯಾಜ್, ರೇವತಿ ಪ್ರಿಯ, ಸಿರಿ ಇದ್ದರು.

Post a Comment

Previous Post Next Post