ಹೆಚ್.ವಿಶ್ವನಾಥ್ ಹೇಳಿಕೆ ವಿಚಾರ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಜೆ.ಗೌಡ ಪ್ರತಿಕ್ರಿಯೆ

ಹಾಸನ :  ಯಡಿಯೂರಪ್ಪ ಬದಲಾವಣೆ ಮಾಡಬೇಕು ಎಂಬ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರ

ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಜೆ.ಗೌಡ ಪ್ರತಿಕ್ರಿಯೆ 



ವಿಶ್ವನಾಥ್ ಅವರು ಯಾರು.?
ಎಂ.ಎಲ್.ಸಿ ಯವರಾ.? ಎಂದು ಪ್ರಶ್ನೆ

ಅವರು ಪಾರ್ಟಿಗೆ ಹೊಸಬರಿದ್ದಾರೆ
ಅವರಿಗೆ ಪಾರ್ಟಿ ವಿಚಾರಗಳು ಬಗ್ಗೆ ಹೆಚ್ಚು ಮಾಹಿತಿ ಇರೋದಿಲ್ಲ

ಅವರು ಹಿರಿಯರಿದ್ದಾರೆ ಅವರ ಅನುಭವ ಬಳಸಿಕೊಳ್ಳುತ್ತೆವೆ

ಆದರೆ ಪಕ್ಷದ ಸಿದ್ದಾಂತ ಮತ್ತು ವಿಚಾರಗಳನ್ನು ನಮ್ಮ ಪಕ್ಷದ ಹಿರಿಯರು ಮತ್ತು ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ

ಹಾಗಾಗಿ ಹಿರಿಯರಾದ ವಿಶ್ವನಾಥ್ ಬಗ್ಗೆ ಮಾತನಾಡಲ್ಲ 

ಅವರಿನ್ನು ಆಚಾರ ವಿಚಾರ ತಿಳಿದು ಕೊಳ್ಳೊಕೆ ಸಮಯ ಹಿಡಿಯುತ್ತೆ

ಬಹಿರಂಗವಾಗಿ ಮಾತನಾಡ ಬಾರದು ಅನ್ನೊದು ನಮ್ಮ ಪಕ್ಷದಲ್ಲಿ ಮೊದಲನೆಯದು

ಆ ಸಿದ್ದಾಂತ ಮತ್ತು ವಿಚಾರಕ್ಕೆ ಎಲ್ಲಾ ಬದ್ದರಾಗಿರಬೇಕು. 

ಅದು ವಿಶ್ವನಾಥ್ ಅವರಿಗೂ ಅನ್ವಯವಾಗುತ್ತದೆ

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ರು

ಪಕ್ಷದ ಹಿತ ದೃಷ್ಟಿಯಿಂದ ಮೊದಲನೇ ಬಾರಿ ಶಾಸಕನಾಗಿ 
ಹೇಗೆ ಕೆಲಸ ಮಾಡಬೇಕು

ನಮ್ಮ ಭಾಗದಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡಬಹುದೆಂಬ ಸಲಹೆ ಸೂಚನೆ ಪಡೆದಿದ್ದೇನೆ

ಅವರೇ ತಿಳಿಸಿದಂತೆ ರಾಜ್ಯದಲ್ಲಿ ಯಡಿಯೂರಪ್ಪ ಅವರು ಇನ್ನೂ 2 ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ

ಮುಖ್ಯಮಂತ್ರಿಯಾಗಿ ಮುಂದುವರೀತಾರೆ ಅಂತ ಪಕ್ಷ ಆದೇಶ ಕೊಟ್ಟಿದೆ 

ಪಕ್ಷದ ಒಬ್ಬ ಶಿಸ್ತಿನ ಸಿಪಾಯಿಯಾಗಿ ಪಕ್ಷ ಏನು ಹೇಳಿದೆ ಅದಕ್ಕೆ ಸಹಮತ ವ್ಯಕ್ತಪಡಿಸೋದು ಪ್ರತಿ ಶಾಸಕನ ಕರ್ತವ್ಯ

ಅದನ್ನು ಮೀರಿ ಯಾರು ನಡೀತಾರೆ ಎಂದ್ರೆಅವರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ

ವಿಶ್ವನಾಥ್ ಅವರ ಬಗ್ಗೆ ಪಕ್ಷದ, ಹಿರಿಯರು ರಾಜ್ಯಾಧ್ಯಕ್ಷರು ಮಾತನಾಡುತ್ತಾರೆ

Post a Comment

Previous Post Next Post