ಸ್ಫೋಟಗೊಂಡ ಸ್ಥಳಕ್ಕೆ ಸಂಸದರ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ,

ಆಲೂರು: ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಕಳೆದ ಸೋಮವಾರ ನಡೆದ ಜಿಲೇಟಿನ್ ಸ್ಪೋಟಗೊಂಡ ಸ್ಥಳಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಸ್ಥಳಕ್ಕೆ ಭೇಟಿ ನೀಡಿದರು.


ಮಾಧ್ಯಮದವರೊಂದಿಗೆ ಮಾತನಾಡಿ ಜಿಲೇಟಿನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿಗಳನ್ನು  ಕಲೆಹಾಕಿ ರ‍್ಚೆ ನಡೆಸಿದ್ದೇನೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರ ಜೊತೆಗೆ ಮಾತನಾಡಿ  ಮಕ್ಕಳಿಗೆ  ಯಾವುದೇ ರೀತಿಯ ಜೀವಕ್ಕೆ ಅಪಾಯ ಆಗದ ರೀತಿಯಲ್ಲಿ  ಕ್ರಮವಹಿಸಬೇಕು ಎಂದು ಹೇಳಿದ್ದೇನೆ. ಜಿಲೇಟಿನ್ ಸ್ಫೋಟದಲ್ಲಿ ಗಾಯಗೊಂಡ  ಮಕ್ಕಳಿಗೆ  

ಪರಿಹಾರವಾಗಿ ಹೆಣ್ಣು ಮಗಳಿಗೆ ೭.೫ ಲಕ್ಷ ಹಾಗೂ ಗಂಡು ಮಗುವಿಗೆ  ೫ ಲಕ್ಷ  ನೀಡುವಂತೆ  ತಿಳಿಸಿಲಾಗಿದೆ. ಹಾಗೂ  ಎರಡು ಮಕ್ಕಳಿಗೂ ಅಳವಾದ ಗಾಯಗಳಾಗಿರುವುದರಿಂದ ಹಾಗೂ ಬಾರಿ ಶಬ್ದದಿಂದ ಕಿವಿ ಕೇಳಿಸುತ್ತಿಲ್ಲವಾದ್ದರಿಂದ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.ಮಕ್ಕಳ  ಚಿಕಿತ್ಸೆಯ ಪರ‍್ಣ ಜಾವಬ್ದಾರಿಯನ್ನು ಗುತ್ತಿಗೆದಾರ ಹಾಗೂ  ಇಂಜಿನಿಯರ್ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಸ್ಫೋಟಕ್ಕೆ ಸಂಬಂಧಿಸಿದಂತೆ  ಎಜೇಂನ್ಸಿಯವರ ವಿರುದ್ಧ ದೂರು ದಾಖಲಾಗಿ ಪೊಲೀಸರು ಮೂರು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಇಂಜಿನಿಯರ್ ಗಳ  ತಪ್ಪೇನು ಇಲ್ಲ ಎಜೇಂನ್ಸಿ ಹಾಗೂ  ಗುತ್ತಿಗೆದರಾನ ನರ‍್ಲಕ್ಷ್ಯವೇ ಕಾರಣ ಎಂದು ಆರೋಪ  ಮಾಡಿದರು.

ಚನ್ನಹಳ್ಳಿ ಹೋಗುವ ಸಂರ‍್ಭದಲ್ಲಿ ಆಲೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎತ್ತಿಹೊಳೆ ಇಲಾಖೆ ಎಇಇ ಸಿದ್ದರಾಮಯ್ಯ ಅವರನ್ನು ಕರೆಸಿ ಘಟನೆ ಬಗ್ಗೆ ಸಂಪರ‍್ಣ ಮಾಹಿತಿ ಪಡೆದು ಗುತ್ತಿಗೆದಾರರು ಕಾಮಗಾರಿ ಮುಗಿಸಿ ಬೇರೆಡ ಸ್ಥಳಾಂತರ ಮಾಡುವ ಸಂರ‍್ಭದಲ್ಲಿ ಏನು ಮಾಡುತ್ತಿದ್ದೀರಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಬೇಜವಾಬ್ದಾರಿ ಮುಂದುವರಿಸಿದರೇ ತಕ್ಕ ಶಾಸ್ತ್ರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂರ‍್ಭದಲ್ಲಿ ಎತ್ತಿನಹೊಳೆ ಇಲಾಖೆ ಸಹಾಯಕ ನರ‍್ದೇಶಕ ಸಿದ್ದರಾಮಯ್ಯ,ಸಕಲೇಶಪುರ ಡಿವೈಸ್ಪಿ ಗೋಪಿ,ಜಿಲ್ಲಾ ಎಪಿಎಂಸಿ ನರ‍್ದೇಶಕ ಕೆ.ಎಸ್.ಮಂಜೇಗೌಡ,ತಾಲ್ಲೂಕು ಪಂಚಾಯಿತಿ ಸದಸ್ಯ ನಟರಾಜ್ ನಾಕಲಗೊಡು ಹಾಗೂ  ಗ್ರಾಮಸ್ಥರಿದ್ದರು.


Post a Comment

Previous Post Next Post