ತಹಸೀಲ್ದಾರ್ ಎನ್.ವಿ. ನಟೇಶ್ ಅಧಿಕಾರ ಹಸ್ತಾಂತರ

ಬೇಲೂರು: ಹಾಸನಕ್ಕೆ ವರ್ಗಾವಣೆಗೊಂಡಿರುವ ತಹಸೀಲ್ದಾರ್ ಎನ್.ವಿ. ನಟೇಶ್ ಅವರು ನೂತನ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಎನ್.ವಿ. ನಟೇಶ್, ಎಲ್ಲರ ಸಹಕಾರದಿಂದ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದೆಯೂ ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ಹೀಗೆ ಇರಲಿ, ನೂತನ ತಹಸೀಲ್ದಾರ್‌ಗೂ ಉತ್ತಮ ಸಹಕಾರ ನೀಡುವಂತೆ ಹೇಳಿದರು.

ಉಪ ತಹಶೀಲ್ದಾರ್ ಪ್ರದೀಪ್ ನಾಗರಾಜು ಗಂಗಾಧರ್ ,ತುಳಸಿದಾಸ್ ಹಾಗೂ ತಾಲೂಕು ಕಚೇರಿ ಸಿಬ್ಬಂದಿವರ್ಗದವರು ಹಾಜರಿದ್ದರು.

Post a Comment

Previous Post Next Post