ಹಿಮಾತ್ಸಿಂಕಾ ಕಂಪನಿಯಿಂದ ಹನುಮಂತಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ಹೆಚ್ಚಾದ ಕರೋನಾ ಸೋಂಕು ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕು ಜಾಸ್ತಿ ಹರಡದಂತೆ ಇಂದು ಕಾರ್ಖನೆಗೆ ಸ್ಯಾನಿಟೇಸರ್ ಅನ್ನು ಸಚಿನ್ ಗೌಡ ನೇತ್ರುತ್ವದಲ್ಲಿ ಮಾಡಲಾಯಿತು..
ನಂತರ ಮಾತನಾಡಿದ ಸಚಿನ್ ಗೌಡ ಕರೋನಾ ಎರಡನೇ ಅಲೆಯಿಂದ ಎಲ್ಲರೂ ಬೇಸತ್ತಿದ್ದು ಜೀವನವೇ ಅಲ್ಲೋಲಾ ಕಲ್ಲೋಲವಾಗಿದೆ ಹನುಮಂತಪುರ ಗ್ರಾಮಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ಸೋಂಕು ಹೆಚ್ಚಾಗಲು ಹಿಮಾತ್ಸಿಂಕಾ ಕಾರ್ಖನೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು . ಇ ಕಾರ್ಖನೆಯಲ್ಲಿ ಕೆಲಸ ಮಾಡುವವವರು ಶೇ 80 ಹೊರ ರಾಜ್ಯದವರಾಗಿದ್ದು ಎಲ್ಲರೂ ಹನುಮಂತಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು ಸರ್ಕಾರದ ಆದೇಶದ ಪ್ರಕಾರ ಶೇ ೫೦ ರಷ್ಟು ಕೆಲಸ ಮಾಡಬೇಕು ಆದರೆ ಇ ಕಾರ್ಖನೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ತನ್ನ ಮೊಂಡತನವನ್ನು ಪ್ರದರ್ಶಿಸುತ್ತಿದೆ ಕಾರ್ಖನೆಯಲ್ಲಿ ಕರೋನಾ ಸೋಂಕಿತರು ಹೆಚ್ಚಾದರೂ ಕೂಡ ಅದಕ್ಕೆ ಯಾವುದೇ ಕ್ರಮವನ್ನು ಕಾರ್ಖನೆಯ ಆಡಳಿತ ಮಂಡಳಿ ತೆಗೆದುಕೊಂಡಿಲ್ಲ ಹೀಗೆ ಮುಂದುವರೆದರೆ ಪರಿಸ್ಥಿತಿ ಕೈ ಮೇರಿ ಹೋಗುತ್ತದೆ ದಯಮಾಡಿ ಜಿಲ್ಲಾಡಳಿತ .ಶಾಸಕರು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಶೀಘ್ರವೇ ಇ ಕಾರ್ಖನೆಯತ್ತ ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಇ ಸಂಧರ್ಭದಲ್ಲಿ ಅಭಿಗೌಡ .ಹೆಚ್ ಟಿ ನಾಗೇಶ್ .ಶ್ರೀಧರ್ ಹಾಗೂ ಜೆ ಡಿ ಎಸ್ ಯುವ ಮುಖಂಡರು ಹಾಜರಿದ್ದರು.
Tags
ಹಾಸನ