ಬೇಲೂರು:ಕೆಪಿಸಿಸಿ ಸದಸ್ಯರೂ ಹಾಗೂ ಪುರಸಭೆ ಮಾಜಿ ಸದಸ್ಯರೂ ಆದ ಬಿ.ಎಲ್.ಧರ್ಮೇಗೌಡ ಮಾತನಾಡಿ, ಜಿ.ಪಂ.ಮಾಜಿ ಸದಸ್ಯ ಈ.ಹೆಚ್.ಲಕ್ಷ್ಮಣ್ ಅವರು ಹೃದಯವಂತರಾಗಿದ್ದಾರೆ. ಇಂದು 500 ಜನರಿಗೆ ಆಹಾರದ ಕಿಟ್ ನೀಡಿದ್ದಾರೆ.
ಇಂತಹವರು ತಾಲ್ಲೂಕಿನಲ್ಲಿ ಇರುವುದು ನಮ್ಮ ಸೌಭಾಗ್ಯ. ಈ ಹಿಂದೆ ಸಹ 2 ಸಾವಿರ ಮಹಿಳೆಯರಿಗೆ ಸೀರೆಯನ್ನು ವಿತರಿಸಿದ್ದರು. ಇನ್ನೂ ಹೆಚ್ಚು ಧಾನಧರ್ಮ ಮಾಡಲಿ ಎಂದು ಹಾರೈಸಿದರು.ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಾಗೇಶ್ ಮಾತನಾಡಿ,ಧಾನಿ ಈ.ಹೆಚ್.ಲಕ್ಷ್ಮಣ್ ಅವರು ಕೊರೊನಾದ ಈ ಸಂದರ್ಭ ಸಂಕಷ್ಟದಲ್ಲಿ ಇರುವವರಿಗೆ ಅಲ್ಪ ಪ್ರಮಾಣದಲ್ಲಿ ನೆರವು ನೀಡಿದ್ದಾರೆ.
ನಿಯಮದಡಿಯಲ್ಲಿ ಆಹಾರದ ಕಿಟ್ ಅನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರೂ, ಜಿ.ಪಂ.ಮಾಜಿ ಸದಸ್ಯರೂ ಆದ ಈ.ಹೆಚ್.ಲಕ್ಷ್ಮಣ್ ಮಾತನಾಡಿ, ಸಂಕಷ್ಟದ ಇಂತಹ ಸಂದರ್ಭ ಸಹಾಯ ಮಾಡಿದರೆ ಅನುಕೂಲ ಎಂದು ಎಲ್ಲಾ ಜಾತಿ ಜನಾಂಗದಲ್ಲಿನ ಅರ್ಹರನ್ನು ಗುರುತಿಸಿ ಆಹಾರದ ಕಿಟ್ ನೀಡಲಾಗುತ್ತದೆ ಸಂಬಂಧಪಟ್ಟ ಜನಾಂಗದ ಪ್ರಮುಖರೇ ಪಟ್ಟಿಯನ್ನು ನೀಡಿದ್ದು ಟೋಕನ್ ಮೂಲಕ ಅರ್ಹರಿಗೆ ಕಿಟ್ ತಲುಪಲು ಹಕಾರಿಯಾಗಿದೆ. ಮನೆಯಲ್ಲಿ ಸ್ಯಾನಿಟೈಸ್, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಲ್ಲಿ ಗಮನ ಇರಬೇಕೆಂದರು.
ಪುರಸಭ ಸದಸ್ಯ ಶಾಂತಕುಮಾರ್ ಮಾತನಾಡಿ,ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಈ.ಹೆಚ್.ಲಕ್ಷ್ಮಣ್ಅವರು 8 ಸಾವಿರ ಮಹಿಳೆಯ ಮಡಿಲು ತುಂಬಿಸುವ ಕೆಲಸ ಮಾಡಿದ್ದರು. ಇಂದು ಸಂಕಷ್ಟದ ದಿನದಲ್ಲಿ ಬಡವರನ್ನು ಗುರುತಿಸಿ ಕೊಂಚ ನೆರವು ನೀಡಿರುವುದು ಸಂತೋಷ.ಆಶಾಕಾರ್ಯಕರ್ತೆಯರು, ಪುರಸಭೆಯ ನೌಕರರು,ಗ್ರಾಮೀಣ ಜನರನ್ನು ಗುರುತಿಸಿ ಸಹಾಯ ಮಾಡಬೇಕೆಂಬ ಉದ್ದೇಶ ಅವರಿಗಿದೆ. ಆರ್ಥಿಕವಾಗಿ ಶಕ್ತಿ ಇರುವವರು ಇದ್ದರೂ ಕೊಡುವ ಮನಸ್ಸು ಇರಬೇಕು. ಆ ಮನಸ್ಸು ಈ.ಹೆಚ್.ಲಕ್ಷ್ಮಣ್ಅವರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಪಿಐ ಶ್ರೀಕಾಂತ್ ಮಾತನಾಡಿ, ಕೋವಿಡ್ ಸಂದರ್ಭ ಮಾಸ್ಕ್ ಧರಿಸಿ,ವ್ಯಾಕ್ಸಿನ್ ಪಡೆದುಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಲ್ಳಿ,ಕೊರೊನಾ ಸೂಚನೆ ಇದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ,ಈ.ಹೆಚ್.ಲಕ್ಷ್ಮಣ್ ಅವರು ಸಹಾಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ರಾಜ್ಯ ಸಫಾಯಿಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಜಿ.ಪಂ.ಸದಸ್ಯ ಸಯ್ಯದ್‍ತೌಫಿಕ್,ಪ್ರಮುಖರಾದ ರಂಗನಾಥ್ ಇತರರು ಇದ್ದರು. ಹಿಂದುಳಿದ ಒಕ್ಕೂಟದ ಕಾರ್ಯದರ್ಶಿ ಮಂಜುನಾಥಶೆಟ್ಟಿ ನಿರೂಪಿಸಿದರು.
ಬೇಲೂರಿನ ಕೋಟೆ ರಂಗಮಂದಿರದಲ್ಲಿ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಈ.ಹೆಚ್.ಲಕ್ಷ್ಮಣ್ ಮಾತನಾಡಿದರು. ಗಣ್ಯರು
ಹಾಜರಿದ್ದರು


