ಚಿಕ್ಕಮಗಳೂರು : ಕಾಫಿನಾಡಲ್ಲಿ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆ ಮುಂದುವರೆದಿದ್ದು ಜಿಲ್ಲೆಯನ್ನು ಮೂರು ದಿನಾ ಯಲ್ಲೋ ಅಲಾರ್ಟ್ ಎಂದು ಘೋಷಣೆ ಮಾಡಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ , ಬಕ್ಕಿ, ತ್ರಿಪುರ, ಬಾರತಿಬೈಲ್, ಹೊಸಹಳ್ಳಿ, ಬಣಕಲ್, ಚೆನ್ನಡಲು ಮುಂತಾದ ಕಡೇ ಬಾರೀ ಗಾಳಿ ಮಳೆ ಬರುತ್ತಿದ್ದು ಜನ ಹೈರಾಣು.
ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಗ್ರಾಮದ ಸುಬ್ಬಯ್ಯ ಮನೆ ಮಳೆಯಿಂದ ಹಾನಿಗೊಂಡಿದೆ. ಕೊಟ್ಟಿಗೆಹಾರದ ರಾಮ ನಗರ ರತ್ನಮ್ಮ ಮನೆಯ ಗಾಳಿಗೆ ಹಾರಿದ ಹಂಚುಗಳು ಹಾಗೂ ಮೂಡಿಗೆರೆಯ ಹೆಸ್ಗಲ್ ನಲ್ಲಿ ಮನೆಯ ಗೋಡೆ ಕುಸಿತಗೊಂಡಿದೆ
ವರದಿ: ತನು
Tags
ಚಿಕ್ಕಮಗಳೂರು