ಬೇಲೂರಿನ ಕಾಂಗ್ರೆಸ್ ನಲ್ಲಿ ಅಚ್ಚರಿಯ‌ ಬೆಳವಣಿಗೆ‌‌.ಜೆಡಿಎಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಯುವ ನಾಯಕರು,

ಬೇಲೂರು ತಾಲ್ಲೂಕು ಬಿಕ್ಕೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಬೇಲೂರು ತಾಲ್ಲೂಕು ವಿಧ್ಯಾರ್ಥಿ ಜನತಾದಳ ಅಧ್ಯಕ್ಷರು ಚೇತನ್ ಸಿ ಗೌಡ ಜೆಡಿಎಸ್ ತೊರೆದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗು ಉಪಾಧ್ಯಕ್ಷ ರಾದ ಬಿ.ಶಿವರಾಂ ರವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಹಾಗೂ ಬಿಜೆಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾರ್ಜಿತ ಅಭ್ಯರ್ಥಿ ಕಾಯಿ ಲಕ್ಷ್ಮಣ್ ರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು,

ಬೇಲೂರು ತಾಲ್ಲೂಕು ವೀರಶೈವ ಲಿಂಗಾಯತ ಸಂಘದ ಯುವ ಘಟಕದ ಅಧ್ಯಕ್ಷ ಚೇತನ್ ಗೆಂಡೆಹಳ್ಳಿ ಮತ್ತು ಬೇಲೂರು ಬಿಜೆಪಿಯ ಯುವ ಮುಖಂಡ ಭರತ್ ಇಂದು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ನಿಶಾಂತ್, ಜಿಲ್ಲಾ ಪಂಚಾಯತಿ ಸದಸ್ಯ ತೌಫೀಕ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೃಷ್ಣೇಗೌಡ, ಪುರಸಭೆ ಸದಸ್ಯರಾದ ಜಿ ಶಾಂತಕುಮಾರ್, ಜಮಾಲ್, ಅಶೋಕ್, ತಿರ್ಥಕುಮಾರಿ ಎಂ ಆರ್ ವೆಂಕಟೇಶ್, ಅಕ್ರಂ ಪಾಷ,  ಕಾಂಗ್ರೆಸ್ ಕಾರ್ಯಕರ್ತರಾದ ಜವಗಲ್ ಶ್ರೀನಿವಾಸ್, ಮೊಹಮ್ಮದ್ ಆಸೀಫ್ ಮತ್ತಿತರರು ಹಾಜರಿದ್ದರು.

Post a Comment

Previous Post Next Post