ಪುಲ್ವಾಮದಲ್ಲಿ ಮನೆಗೆ ನುಗ್ಗಿ ಪೊಲೀಸ್ ಅಧಿಕಾರಿ, ಪತ್ನಿ, ಪುತ್ರಿಯನ್ನು ಹತ್ಯೆಗೈದ ಉಗ್ರರು


ಜಮ್ಮು ಕಾಶ್ಮೀರದ ತ್ರಾಲ್​ನ ಹರಿಪರಿಗಂ ಗ್ರಾಮದಲ್ಲಿರುವ ಮಾಜಿ ಪೋಲಿಸ್ ಅಧಿಕಾರಿ ಫಯಾಜ್ ಅಹ್ಮದ್‌ನ ಕುಟುಂಬಸ್ಥರನ್ನು ಉಗ್ರರು ಹತ್ಯೆಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ವಿಶೇಷ ಪೊಲೀಸ್ ಅಧಿಕಾರಿ (SPO) ಆಗಿರುವ ಫಯಾಜ್ ಅಹಮದ್ ತಲೆಗೆ ಗುಂಡು ಹಾರಿಸಿದ ಉಗ್ರರು ಏಕಾಏಕಿ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡಿದ್ದ ಫಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಅಡ್ಡ ಬಂದ ಫಯಾಜ್ ಅವರ ಹೆಂಡತಿ ಮತ್ತು ಮಗಳ ಮೇಲೂ ಉಗ್ರರು ಗುಂಡು ಹಾರಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿದ್ದ ಫಯಾಜ್ ಅವರ ಹೆಂಡತಿ ಮತ್ತು ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

ಎರಡು ವಷ೯ದ ಹಿಂದೆ ಫಯಾಜ್‌ಗೆ ರಾಜೀನಾಮೆ ನೀಡಲು ಉಗ್ರರು ಒತ್ತಾಯಿಸಿದರು. ಆದರೆ ಉಗ್ರರ ಒತ್ತಡಕ್ಕೆ ಮಣಿಯಲಿಲ್ಲ. ಅದೆ ಜಿದ್ದಿನಲ್ಲಿ ಉಗ್ರರು ಹತ್ಯೆ ಮಾಡಿರುವುದಾಗಿ ಪೋಲಿಸರು ಶಂಕಿಸಿದ್ದಾರೆ.

Post a Comment

Previous Post Next Post