ರಾಮನಾಥಪುರ.;- ಲೋಕ ಕಲ್ಯಾಣಾರ್ಥವಾಗಿ ಇಂತಹ ವಿವಿಧ ಪೂಜಾ ಕೈಂಕರ್ಯಗಳು, ತಾರಕಹೋಮ ಮಹಾ ಪೂಜೆಯಲ್ಲಿ ಜಗತ್ತಿನ ಅನಿಷ್ಠಗಳನ್ನೆಲ್ಲ ನಷ್ಟಗೊಳಿಸುವ ಶಕ್ತಿ ಇದೆ. ಎಂದು ಶ್ರೀ ಶನೇಶ್ವರಸ್ವಾಮಿ ದೇವಾಲಯದ ಅಭಿವೃದ್ದಿ ವ್ಯವಸ್ಥಾಪಕರು ನಾಗಣ್ಣ ಅವರು ತಿಳಿಸಿದರು.
ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾತ್ತಿಯ ಶಿರದನಹಳ್ಳಿ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ತ್ರಯೋದಶಿ ಪ್ರಯುಕ್ತ ದೇವಸ್ಥಾನದ ಸಮಿತಿ ಮತ್ತು ಭಕ್ತರಿಂದ ನಡೆದ ತಾರಕಹೋಮ. ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ಸಹ ತಮ್ಮ ಅರೋಗ್ಯ ಕಾಪಾಡಿಕೊಳ್ಳಬೇಕು. ಮನಸ್ಸು ಏಕಾಗ್ರತೆಗೊಳಿಸಿಕೊಳ್ಳುವುದರಿಂದ ಎಲ್ಲವೂ ಸುಲಭವಾಗುತ್ತದೆ. ದೇವಾಲಯಗಳಲ್ಲಿ ಇಂತಹ ಪೂಜೆ ಮತ್ತು ಜಪಗಳಿಂದ ನೆಮ್ಮದಿ ಸಿಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಮಾತನಾಡಿ ಸಾಂಸ್ಕೃತಿಕ, ಧಾರ್ಮಿಕ ಸೌಹಾರ್ದತೆಯ ಪ್ರತೀಕವಾದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಪೂಜೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಹಬ್ಬ ಹರಿದಿವಸಗಳಲ್ಲಿ ಹಾಗೂ ಇತರೆ ದಿವಸಗಳಲ್ಲಿಯೂ ಸಹ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ ದೇವರ ದರ್ಶನ ಪಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಂದವರಿಗೆ ದಾಸೋಹದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ, ಸುನೀಲ್‌ಕುಮಾರ್, ಮುಖಂಡರಾದ ಮಂಜೇಗೌಡ, ರವೀಂದ್ರ, ವೆಂಕಟೇಶ್, ಸ್ವಾಮಣ್ಣ, ದಿನೇಶ್, ರವಿಕುಮಾರ್, ಪ್ರಕಾಶ್, ದೇವರಾಜು, ಗಣೇಶ್, ಶಿವನಾಯ್ಕ, ದೊರೇಶ್, ನಾಗೇಂದ್ರ, ರಾಜಣ್ಣ, ಸಣ್ಣೇಗೌಡ ಮುಂತಾದವರು ಭಾಗವಹಿಸಿದ್ದರು.