ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಉದ್ದೇಶಕಾಗಿ ಆಲೂಗಡ್ಡೆ ವ್ಯಾಪಾರವನ್ನು ಬುಧವಾರದಿಂದ ಪ್ರಾರಂಭಿಸಿದ್ದು, ಮೊದಲ ದಿನವೇ ೫೦ ಲಾರಿ ಲೋಡ್, ೧೫ ಸಾವಿರ ಚೀಲ ಪೂರೈಕೆ ಮಾಡಲಾಗಿತ್ತು. ಖರೀದಿ ವೇಳೆ ಸಾಮಾಜಿಕ ಅಂತರ ಮರೆತು ರೈತರು ವ್ಯಾಪಾರದಲ್ಲಿ ತೊಡಗಿದ್ದರು.
ರೈತರು ಬೆಳಿಗ್ಗೆ ೧೦ ಗಂಟೆಯೊಳಗೆ ಎ.ಪಿ.ಎಂ.ಸಿ ಗೆ ಬಂದು, ಬಿತ್ತನೆ ಆಲೂಗಡ್ಡೆಯನ್ನು ಖರೀದಿಸಬಹುದಾಗಿದೆ. ಆಲೂಗಡ್ಡೆ ಸಾಗಾಣಿಕೆ ಮಾಡುವ ವಾಹನಗಳಿಗೆ ಯಾವುದೇ ನಿರ್ಭಂಧವಿರುವುದಿಲ್ಲ. ಖಾಲಿ ಹಾಗೂ ತುಂಬಿದ ಸಾಗಾಣಿಕೆ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿರುತ್ತದೆ, ವರ್ತಕರು ಹಾಗೂ ರೈತರುಗಳು ಕೊವಿಡ್ ಮಾರ್ಗಸೂಚಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ವರ್ತಕರು ಕೂಡ ಸಾಮಾಜಿಕ ಅಂತರದಲ್ಲಿ ರೈತರು ವ್ಯಾಪಾರ ಮಾಡುವಂತೆ ಹೇಳಿದರೂ ಕಿವಿಗೊಡದೆ ಅಲ್ಲಲ್ಲಿ ಸಾಮಾಜಿಕ ಅಂತರ ಕಾಪಾಡದೇ ಒಟ್ಟಿಗೆ ಗುಂಪಾಗಿ ನಿಂತಿರುವುದು ಕಂಡು ಬಂದಿತು. ಸಭೆಯಲ್ಲಿ ನಿಗಧಿ ಮಾಡಿದಂತೆ ಕ್ವಿಂಟಲ್ ಗೆ ೧೬೦೦ ರೂಗಳಂತೆ ಬಿತ್ತನೆ ಆಲೂಗೆಡ್ಡೆ ವ್ಯಾಪಾರ ಮಾಡಲಾಗುತಿತ್ತು. ಮೊದಲ ದಿವಸ ರೈತರು ಬಾರಿ ಸಂಖ್ಯೆಯಲ್ಲಿಯೇ ಆಗಮಿಸಿದ್ದು, ವರ್ತಕರು ಕೂಡ ಬಿತ್ತನೆ ಆಲೂಗೆಡ್ಡೆಗೆ ಪೂಜೆ ಸಲ್ಲಿಸಿ ವ್ಯಾಪಾರ ಆರಂಭಿಸಿದರು. ಬಿತ್ತನೆ ಆಲೂಗೆಡ್ಡೆ ಕೊಂಡುಕೊAಡು ವಾಪಸ್ ಹೋಗಲು ರೈತರು ಪರದಾಡಿದರು. ಎಪಿಎಂಸಿಯಲ್ಲಿ ಟ್ರಾಫೀಕ್ ಜಾಮ್ ಸಮಸ್ಯೆ ಎದುರಾಯಿತು. ಮುನ್ನೇಚ್ಚರಿಕ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದು ಬಸ್ತ್ ಮಾಡಲಾಗಿತ್ತು. ಬೆಳಿಗೆ ಬೆಳಿಗ್ಗೆ ೧೦ರ ವರೆಗೂ ಬಿತ್ತನೆ ಆಲೂಗೆಡ್ಡೆ ಖರೀದಿ ಮಾಡಲು ಅವಕಾಶ ಕಲ್ಪಿಸಿದೆ. ೧೦ ಗಂಟೆ ಒಳಗೆ ಬಂದ ರೈತರಿಗೆ ಮಾತ್ರ ಆಲೂಗೆಡ್ಡೆ ಕೊಡಲಾಗುತ್ತದೆ. ನಂತರ ಬರುವವರಿಗೆ ಅವಕಾಶ ಇರುವುದಿಲ್ಲ. ಹಲವು ದಿನಗಳಿಂದ ಉತ್ತಮ ಮಳೆ ಬರುತ್ತಿರುವುದರಿಂದ ಬಿತತ್ನೆ ಆಲೂಗೆಡ್ಡೆ ಕೊಂಡುಕೊಳ್ಳಲು ರೈತರು ಮುಗಿ ಬಿದ್ದಿದ್ದರು.
ಮಾಧ್ಯಮದೊಂದಿಗೆ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷರಾದ ಈರುಳ್ಳಿ ಗೋಪಾಲ್ ರವರು, ಈ ವರ್ಷ ಜಿಲ್ಲಾಡಳಿತವು ಬಿತ್ತನೆ ಆಲೂಗೆಡ್ಡೆ ವ್ಯಾಪಾರ ಮಾಡಲು ಮೇ.೧೨ ರಿಂದ ಆರಂಭಿಸಲು ಸೂಚಿಸಿದಂತೆ ಬೆಳಿಗ್ಗೆ ೯ ರಿಂದ ೧೦ ಗಂಟೆಯವರೆಗೂ ವ್ಯಾಪಾರ ಮಾಡಲಾಗುತ್ತಿದೆ. ರೈತರು ಬಿತ್ತನೆ ಆಲೂಗೆಡ್ಡೆಯನ್ನು ಡೆಲವರಿ ಮಾಡಲು ಮದ್ಯಾಹ್ನ ೧೨ರ ವರೆಗೂ ಅವಕಾಶ ಕಲ್ಪಿಸಿದೆ. ಆಲೂಗಡ್ಡೆ ಸಾಗಾಣಿಕೆ ಮಾಡುವ ವಾಹನಗಳಿಗೆ ಯಾವುದೇ ಅಡಚಣೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಆದರೇ ರೈತರು ೧೦ ಗಂಟೆ ಒಳಗೆ ಬಂದು ಖರೀದಿ ಮಾಡಬಹುದಾಗಿದೆ ಎಂದರು. ಮೊದಲ ದಿನದಂದು ಸ್ಟೋರೆಜ್ ನಿಂದ ೫೦ ಲೋಡ್ ಬಿತ್ತನೆ ಆಲೂಗೆಡ್ಡೆಯು ಎಪಿಎಂಸಿಗೆ ಬಂದಿದ್ದು, ಒಟ್ಟು ೧೫ ಸಾವಿರ ಚೀಲ ವ್ಯಾಪಾರವಾಗುವ ನಿರೀಕ್ಷೆ ಇದೆ. ಕ್ವಿಂಟಲ್ ಗೆ ೧೬೦೦ ರೂಗಳಂತೆ ವ್ಯಾಪಾರ ಮಾಡಲಾಗುತ್ತಿದೆ. ಮೊದಲನೆ ದಿನವಾಗಿರುವುದರಿಂದ ಮತ್ತು ಸಮಯ ಕಡಿಮೆ ಇರುವುದರಿಂದ ಆತುರದಲ್ಲಿ ಖರೀದಿ ಮಾಡಲು ಮುಂದಾಗಿದ್ದಾರೆ. ಎರಡನೇ ದಿನದಿಂದ ಅಷ್ಟೊಂದು ಗೊಂದಲ ಇರುವುದಿಲ್ಲ ಎಂದು ಹೇಳಿದರು.