ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಜನಸೇವೆ ಪ್ರತಿಯೊಬ್ಬರಿಗೂ ಮಾದರಿ: ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ

 ಮಂಡ್ಯ .ಜೂ 27 - ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ದಕ್ಷತೆ ಜನಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ  ಮಾದರಿ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ ಹೇಳಿದರು.

    ಜಿಲ್ಲಾಧಿಕಾರಿ ಗಳ ಕಛೇರಿ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 512 ನೇ ಜಯಂತಿಯಲ್ಲಿ ಮಾತನಾಡಿದ ಅವರು, ಹೆಮ್ಮೆಯ ಕನ್ನಡಿಗ ಬೆಂಗಳೂರು ನಗರದ ನಿರ್ಮಾತೃ, ಕಾಡಗಿದ್ದ ಜಾಗವನ್ನ ನಗರವನ್ನಾಗಿ ಮಾಡಿದ ಧೀರ ನಾಡಪ್ರಭು ಕೆಂಪೇಗೌಡ ಎಂದರು.

 ಊರನ್ನ ಬೃಹತ್ ನಗರವನ್ನಾಗಿ ಮಾಡಿದ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿದ್ದಾರೆ ಎಂದರು.

ಕೊರೊನಾ ಇರುವ ಕಾರಣ ಸರ್ಕಾರದ ಮಾರ್ಗಸೂಚಿಯಂತೆ ಇಂದು ಸರಳವಾಗಿ ಜಯಂತಿ ಆಚರಣೆ ನಡೆಯುತ್ತಿದೆ ಎಂದರು.

   ಯಲಹಂಕದ ಅರಸರಾದ ಇವರು ನಾಲ್ಕು ಜೋಡೆತ್ತುಗಳ ತೇರನ್ನು ಎಳೆದು ಊರನ್ನು ಅಭಿವೃದ್ಧಿ ಪಡಿಸಿದ ಹರಿಕಾರ ಎಂದರು.

   ಬೆಂಗಳೂರು ಎಂದರೆ ಐಟಿ ಬಿಟಿ ನಗರ ಎಂದು ಈಗ ಹೆಸರುವಾಸಿ . ಶತಮಾನದ ಹಿಂದೆಯೇ ಅದು ಹಸಿರು ನಗರಿ , ಕೆರೆಗಳ ಊರು .  ಪೇಟೆಗಳ ನಗರ ಎಂದರು. 

ಬೆಂಗಳೂರು ನಗರ ಇದರ ಹಿಂದೆ ಇದ್ದ ಕನಸುಗಾರ ಆಡಳಿತಗಾರ ನಾಡಪ್ರಭು ಕೆಂಪೇಗೌಡ . ವಾಣಿಜ್ಯ , ಐಟಿಬಿಟಿ ನಗರವಾಗಿ ಅತೀ ವೇಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ , ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ತಕ್ಷಣ ನೆನಪಾಗುವುದು ಈ ಊರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಎಂದರು.

    ಹಾಗಾಗಿಯೇ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಅತಿ ದೊಡ್ಡ ಬಸ್ ನಿಲ್ದಾಣ , ಮೆಟ್ರೋನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ಅವರ ಹೆಸರು ಸದಾ ಚಿರಸ್ಥಾಯಿ ಎಂದರು.

 ಎಲ್ಲ ಜಾತಿ , ಮತ , ಪಂಥ , ಧರ್ಮದ ಜನರೂ ಬದುಕು ಕಟ್ಟಿಕೊಳ್ಳಲು ಅನುವಾಗುವ ರೀತಿ ಇಂತಹದೊಂದು ನಗರವನ್ನು ಕಟ್ಟಿದ ಮಹಾನ್ ವ್ಯಕ್ತಿಯ ಸಾಧನೆಯೂ ಅμÉ್ಟೀ ಮಹತ್ವದ್ದು  ಎಂದರು.


    ನಂತರ  ಜಿ.ಪಂ ಸಿಇಒ ದಿವ್ಯಪ್ರಭು ಮಾತನಾಡಿ, ಬೆಂಗಳೂರಿನ ನಿರ್ಮಾಣಕ್ಕೆ ಬೀಜವೂರಿದ್ದು ಕೆಂಪೇಗೌಡರು ಅವರ ಪರಿಶ್ರಮದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂದರು.

ದೇಶದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಪಡೆದಿರುವ ಬೆಂಗಳೂರು, ಎಲ್ಲ ಜಾತಿ , ಮತ , ಪಂಥ , ಧರ್ಮದ ಜನರಿಗೆ ಬದುಕು ಕಟ್ಟಿಕೊಟ್ಟಿದೆ . ಇಂತಹ ಸುಂದರ ನಗರ ನಿರ್ಮಾಣವಾಗಲು    ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ ಎಂದರು.

   ಜಿಲ್ಲಾಧಿಕಾರಿ ಎಸ್.ಅಶ್ವಥಿ ಕಚೇರಿಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುμÁ್ಪರ್ಚನೆ ನೆರವೇರಿಸಿದರು.

    ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್,  ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಬಾಣಸವಾಡಿ ನಾಗಣ್ಣ, ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ, ರಜನಿರಾಜ್,  ನೀನಾಪಾಟೀಲ್ , ನಗರಸಭಾ ಸದಸ್ಯೆ ಸೌಭಾಗ್ಯ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Post a Comment

Previous Post Next Post