ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಾಹಿತಿ ಶ್ರೀ ಕೊಟ್ರೇಶ್ ಎಸ್. ಉಪ್ಪಾರ ರವರು ಸಾಹಿತ್ಯ ಹಾಗೂ ಸಂಘಟನೆಯಲ್ಲಿ ಸಾಧನೆ ಮಾಡಿದ ಹೆಗ್ಗಳಿಕೆ ಇವರದ್ದು. 'ಇವ ನಮ್ಮವ' ನೆಂಬ ಭಾವ ಹೊಂದಿರುವ ಶ್ರೀಯುತರು ಸಕಲರೊಂದಿಗೂ ಸಶ್ನೇಹ ಬೆಳೆಸಿ ತಮ್ಮೊಟ್ಟಿಗೆ ಕರೆದುಕೊಂಡು ಹೋಗುವ ಮನೋವೃತ್ತಿ ಮೆಚ್ಚುವಂಥದ್ದು. ನವ್ಯ ˌನವ್ಯೋತ್ತರˌ ಪ್ರಗತಿಶೀಲˌ ಬಂಡಾಯ ಹಾಗೂ ಷಟ್ಪದಿ ಸಾಹಿತ್ಯ ಕೃಷಿಯಲ್ಲಿ ತೊಡಗುವುದರೊಂದಿಗೆ ಈತರರಿಗೂ ಕಲಿಸುವ ಗುರುವಾಗಿದ್ದಾರೆ. ಅವರ ಸರಳತೆ ನಮಗೆಲ್ಲಾ ಮಾದರಿಯಾಗಿದೆ.
ತೆಂಗಿನಮರ ಎತ್ತರವಾಗಿರುವುದುˌ ಎಳನೀರು ಸಿಹಿಯಾಗಿರುವುದು... ಎಂದು ಯಾರೂ ಹೇಳಬೇಕಾದ ಅವಶ್ಯಕತೆ ಇಲ್ಲ. ಅದನ್ನು ನಾವು ಕಂಡುಕೊಂಡಂತೆ ಸತ್ಯವಾಗಿರುತ್ತದೆ. ಇಲ್ಲಿ ಕೊಟ್ರೇಶ್ ರವರು ಎಷ್ಟೆ ಎತ್ತರಕ್ಕೇರಿದರೂ ಹಮ್ಮುಬಿಮ್ಮು ಇಲ್ಲದ ಸರಳ ವ್ಯಕ್ತಿತ್ವದ ಸಾಂಸ್ಕೃತಿಕ ಮನಸುಳ್ಳ ವ್ಯಕ್ತಿ.
ಮಾನ್ಯರ ಬಗ್ಗೆ ಬರೆಯುವ ಉದ್ದೇಶವಿಷ್ಟೆ...
ಬಸವನಬಾಗೇವಾಡಿ ವಿಶ್ವಗುರು ಬಸವಣ್ಣನವರು ಜನ್ಮತಾಳಿದ ಪುಣ್ಯಭೂಮಿ. ಬಸವ ಜನ್ಮಸ್ಥಳದ "ಬಸವ ಜನ್ಮಭೂಮಿ ಪ್ರತಿಷ್ಠಾನ" 2010 ರಲ್ಲಿ ಆರಂಭವಾಗಿ ದಶಮಾನೋತ್ಸವ ಆಚರಿಸಿಕೊಂಡ ಅಪ್ಪಟ ಸಾಹಿತ್ಯ ವೇದಿಕೆ. ಈ ಪ್ರತಿಷ್ಠಾನ ಪ್ರತಿ ವರ್ಷ ನಾಡಿನ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ಬಸವನಬಾಗೇವಾಡಿಯ "ಬಸವ ಜನ್ಮಸ್ಥಾನ ಸ್ಮಾರಕ" ದ ಮಾದರಸ ಸಭಾಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ. ರಾಜ್ಯಮಟ್ಟದ "ಬಸವಭೂಷಣ" ಹಾಗೂ ರಾಷ್ರ್ಟಮಟ್ಟದ "ಬಸವವಿಭೂಷಣ" ಪ್ರಶಸ್ತಿಯನ್ನು ಅರ್ಹ ಸಾಧಕರಿಗೆ ಕೊಡಮಾಡುತ್ತ ಬಂದಿದೆ. ಅಂಥ ಸಾಧಕರಲ್ಲಿ ಚಲನಚಿತ್ರನಟರಾದ ಬ್ಯಾಂಕ್ ಜನಾರ್ದನ್ˌ ಕುಣಿಗಲ್ ನಾಗಭೂಷಣ್ˌ ಶಂಕರಭಟ್ˌ ಹುಲಿಕಲ್ ನಟರಾಜˌ ಡಿಂಗ್ರಿ ನಾಗರಾಜ್ˌ ಶಬ್ಬೀರ ಡಾಂಗೆˌ ಇಬ್ರಾಹಿಮ್ ಸುತಾರˌ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿˌ ಸಾಹಿತಿˌ ಸಂಶೋಧಕ ಡಾ.ಕೃಷ್ಣಕೊಲ್ಹಾರ ಕುಲಕರ್ಣಿ ಸೇರಿದಂತೆ ನಾಡಿನ ಹಲವಾರು ಸಾಧಕರಿಗೆ ರಾಜ್ಯ ಮತ್ತು ರಾಷ್ರ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಸಕ್ತ 2021ನೇ ಸಾಲಿನ ರಾಷ್ರ್ಟಮಟ್ಟದ "ಬಸವವಿಭೂಷಣ" ಪ್ರಶಸ್ತಿಗೆ ನೆಚ್ಚಿನ ಕೊಟ್ರೇಶ್ ಎಸ್. ಉಪ್ಪಾರ ರವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಕೊವಿಡ್ ನಿಯಮ ಸಡಿಲಿಕೆ ನಂತರ ಕಾರ್ಯಕ್ರಮ ಜರುಗಲಿದೆ.
ರಾಷ್ರ್ಟಮಟ್ಟದ "ಬಸವವಿಭೂಷಣ" ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಟ್ರೇಶ್ ಎಸ್.ಉಪ್ಪಾರ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
