ಜಾಕಿ ಕಂಪನಿಯಿಂದ ಆಕ್ಸಿಜನ್ ಕಾನ್ಸಟ್ರೇಟರ್ ಮತ್ತು ಔಷಧಿ ಕಿಟ್ ಹಸ್ತಾಂತರ

 ಹಾಸನ ಜೂ.೦೨:- ಪೇಜ್ ಪೇಜ್ ಇಂಡಸ್ಟ್ರೀಸ್ ಲೀ., ಜಾಕಿ ಕಂಪನಿ ವತಿಯಿಂದ ಕೋವಿಡ್ ೧೯ ಚಿಕಿತ್ಸಾ ಸೇವೆಗಳಿಗಾಗಿ ೧೦ ಆಕ್ಸಿಜನ್ ಕಾನ್ಸಟ್ರೇಟರ್ ಹಾಗೂ ೪.೩೯ ಲಕ್ಷದ ರೂ ಮೌಲ್ಯದ ಔಷಧಿಗಳು ಸೇರಿದಂತೆ ಸು.೧೧ ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರ  ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.


ಜಾಕಿ ಕಂಪನಿಯ ಸಹಾಯಕ ಮುಖ್ಯ ವ್ಯವಸ್ಥಾಪಕರಾದ ಬಿ.ಆರ್ ಗಿರೀಶ್ ಹಾಗೂ ಕಂಪನಿಯ ಇತರೆ ಅಧಿಕಾರಿ ಸಿಬ್ಬಂದಿಗಳು ಈ ಸಾಮಾಗ್ರಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ಬಿ.ಎ ಪರಮೇಶ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ರೇವತಿ ಸುಧಾಕರ್, ಜಾಕಿ ಕಂಪನಿಯ ಎ.ಜಿ.ಎಂ ಗಿರೀಶ್ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೋಂಡಿದ್ದರು.


Post a Comment

Previous Post Next Post