ಹಾಸನ ಜೂ.೦೨:- ಹಾಸನ ತಾಲ್ಲೂಕಿನ ಶಾಂತಿ ಗ್ರಾಮದಲ್ಲಿರುವ ಹಾಸನಂಬ ಕ್ಲಿನಿಕ್ ಮೇಲೆ ಸಾರ್ವಜನಿಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೂರು ನೀಡಿದ್ದು ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ ೨೦೨೦ ಮತ್ತು ಕೆ.ಪಿಎಂ.ಇ ಕಾಯ್ದೆ ಉಲ್ಲಂಘಿಸಿರುವುದು ಕಂಡುಬAದಿರುವ ಹಿನ್ನಲೆಯಲ್ಲಿ ಕ್ಲಿನಿಕ್‌ನ್ನು ಒಂದು ತಿಂಗಳವರೆಗೆ ಮುಚ್ಚಲು ಜಿಲ್ಲಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಆದೇಶಿಸಿ ಮತ್ತೋಮ್ಮೆ ಈ ರೀತಿ ಪ್ರಕರಣ ಮರು ಕಳಿಸಿದರೇ ಸಂಬAಧಪಟ್ಟ ವೈದ್ಯಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದು ಎಚ್ಚರಿಸಿದ್ದಾರೆ.
ಕ್ಲಿನಿಕ್‌ನ ವೈದ್ಯರಾದ ಡಾ|| ಮನೋಜ್ ಶರ್ಮಾ ಆಯುಷ್ ವೈದ್ಯರಾಗಿದ್ದು ಆಯುಷ್ ಪದ್ಧತಿಯಲ್ಲಿ ನೋಂದಾಯಿಸಿದರು ಸಹ ಅಲೋಪತಿ ಶೆಡ್ಯೂಲ್: ಹೆಚ್ ಔಷಧಿಗಳನ್ನು ನೀಡುತ್ತಿರುವುದು ಕಂಡುಬAದಿರುತ್ತದೆ.
ವಾಯು ಮಾಲಿನ್ಯ ಮಂಡಳಿಯಿAದ bio medical ವೇಸ್ಟ್ management ನ ದೃಢೀಕರಣವನ್ನು ಪಡೆದುಕೊಂಡಿರುವುದಿಲ್ಲ ಹಾಗೂ ಈ ಸಂಬಂಧ ಯಾವುದೇ ದಾಖಲಾತಿಗಳನ್ನು ಒದಗಿಸಿರುವುದಿಲ್ಲ.
ವೈದ್ಯರು ರೋಗಿಗಳಿಗೆ ಪ್ರ‍್ರಿಸ್ಕಿರಿಪ್ಶನ್ ಪ್ಯಾಡ್‌ನಲ್ಲಿ ಸಲಹೆ ನೀಡದೆ ಸಣ್ಣ ಚೀಟಿಯಲ್ಲಿ ಆಲೋಪತಿ ಔಷಧಿಗಳನ್ನು ಬರೆಯುತ್ತಿರುವುದು ಕಂಡು ಬಂದಿರುತ್ತದೆ
ಕ್ಲಿನಿಕ್ ನಲ್ಲಿ bio medical waste management act ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿರುತ್ತದೆ.
ಕ್ಲಿನಿಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಲಿನಿಕ್ ಒಳಾಂಗಣದಲ್ಲಿ ಔಷಧಿ ಸರಬರಾಜು ಮಾಡಲು ನೋಂದಾಯಿತ ಫಾರ್ಮಸಿಸ್ಟ್ ಇರುವುದಿಲ್ಲ.
ಜ್ವರ, ಐ.ಎಲ್.ಐ, ಸಾರಿ ಪ್ರಕರಣಗಳಿಗೆ ವೈದ್ಯರು ರ‍್ಯಾಟ್/ಆರ್.ಟಿ.ಪಿ.ಸಿಆರ್ ಪರೀಕ್ಷೆಗೆ ಒಳಪಡಿಸದೆ ನೇರವಾಗಿ ಚಿಕಿತ್ಸೆ ನೀಡುತ್ತಿದ್ದು ಹಾಗೂ ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಕೆ.ಪಿ.ಎಂ.ಇ ಕಾಯ್ದೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
