. ರಾಮನಾಥಪುರದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದು.

ರಾಮನಾಥಪುರ;-  ಮುಂಗಾರಿನ ಉರಿಬಿಸಿಲಿನ ತಾಪ ಹೆಚ್ಚಿ ಉಂಟಾಗಿದ್ದ ಅಸಹನೀಯ ವಾತಾವರಣಕ್ಕೆ ರಾಮನಾಥಪುರ ಸುತ್ತ ಮುತ್ತ ಬಹುತೇಖ ಭಾಗಗಳಿಲ್ಲಿ ಸೋಮವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಉತ್ತಮ ಮಳೆ ಅಗಿದ್ದಾಗೆ ಇಲ್ಲಿಯವರೆಗೆ ಸುರಿದ ಮಳೆಯಿಂದ  ತಂಪನ್ನೆರಚಿತು.


ತಾಲ್ಲೂಕಿನಲ್ಲಿ ಕೆಲ ದಿವಸಗಳಿಂದ ಮುಂಗಾರು ಚುರುಕುಗೊಂಡಿದ್ದು, ವಿವಿಧ ಬೆಳೆಗಳ ಬಿತ್ತನೆ ಮಾಡಲು ಇದೀಗ ವಾತವರಣ ಉತ್ತಮವಾಗಿದೆ. ಒಂದು ತಿಂಗಳಿAದ ಬಿಸಿಲಿನ ಝಳ ಹೆಚ್ಚಾಗಿತ್ತು. ಮೊದಲ ಸಲ ತುಂತುರು ಮಳೆ ರೈತರಿಗೆ ಸಲ್ಪ ಮಟ್ಟಿಗೆ ತಂಪೆರೆಯಿತು. ರಾಮನಾಥಪುರ, ಕೊಣನೂರು, ದೊಡ್ಡಮಗ್ಗೆ ಹೋಬಳಿಯ್ಯಾಂದAತ ಮಳೆ ಸುರಿಯಿತು. ಈ ಗ್ರಾಮೀಣ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ ತುಂತುರು ಸೋನೆ ಮಳೆ ರೀತಿ ಸುರಿಯಿತು. ಅಲ್ಲದೇ ಮತ್ತೆ ಮಳೆ ಮುಂದೆ ಮಳೆಯಾದರೆ ರೈತರು ಹಾಗೂ ಪ್ರಾಣಿಗಳಿಗೆ ಅನುಕೂಲವಾಗಲಿದೆ. ಮಳೆ ಅಗದೆ ಕೈಕೊಟ್ಟರೆ ದೇಗೆಯಿಂದ ಇನ್ನೂ ಹೆಚ್ಚಿನ ರೋಗ ರುಜಿನಗಳು ಅಗುವುದರಲ್ಲಿ ಸಂಭವವಿದೆ. ತಾಲ್ಲೂಕಿನ್ಯಾದಂತ ಸೋಮವಾರ ತುಂತೂರು ಮಳೆ ಬೆಳಿಗ್ಗೆಯಿಂದ ತುಂತೂರು ಮಳೆ ಅಗಿದ್ದಾಗೆ ಮಳೆ ಜೊತೆಗೆ ಬಳಿಕ ಮೋಡ ಕವಿದ ವಾತಾವರಣವಿತ್ತು.

ಕಳೆದ ವರ್ಷ ಜೂನ್ ಕೊನೆಯವಾರದವರೆಗೆ ಮಳೆ ಬೀಳದ ಹಿನ್ನಲೆಯಲ್ಲಿ ತಂಬಾಕು ಅಲೂ ಬೆಳೆ ಬಿತ್ತನೆ ಬಾರಿ ಹಿನ್ನಡೆಯಾಗಿತ್ತು. ಈ ಬಾರಿ ಅವಧಿಗಿಂತ ಮುನ್ನವೇ ಈವಾಗ ಮಳೆ ಪ್ರಾರಂಭವಾಗಿರುವುದರಿAದ ಸೂಕ್ತವಾದ ವಾತವರಣ ಇರುವುದರಿಂದ ಉಳುಮೆ ಮಾಡಲು ಅನುಕೂಲವಾಗಿದೆ. ಈ ತಿಂಗಳ ಮೊದಲನೇ-ಎರಡನೇ ವಾರದಿಂದಲೇ ತಂಬಾಕು ಸಸಿ ಮಡಿ ಅಲೂ, ಬೆಳೆ ಬಿತ್ತನೆ ಕಾರ್ಯ ಸುರುವಾಗಲಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಸುಮಾರು ೨೫ ಸಾವಿರ ಹೆಕ್ಷರ್‌ನಲ್ಲಿ ಬೆಳೆ ಸಸಿ ಮಡಿ ಮಾಡಲಾಗಿದ್ದು ಹಾಗೂ ಅಲೂ ಬೆಳೆ. ರಾಗಿ, ಜೋಳ ಮತ್ತು ದ್ವೀದಳ ಧಾನ್ಯಗಳನ್ನು ಕೈಗೊಳ್ಳಲಾಗಿದ್ದು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.  ಇನ್ನೂ ಕಡಲವು ಕಡೆ ಪ್ರದೇಶದಲ್ಲಿ ಜೂನ್ ರೊಳಗೆ ಮುಗಿಯುವ ಸಾಧ್ಯತೆ ಇದೆ. ಪ್ರಮುಖ ಬೆಳಗಳಾದ ತಂಬಾಕು ಬೆಳೆ ಜೊತೆಗೆ ಅಲೂ ಬಿತ್ತನೆ ಬೆಳೆ ಕಾರ್ಯ ಚುರುಕುಗೊಂಡಿದ್ದು ಶೇ ೮೦ ರಷ್ಟು ಜಮೀನಿನಲ್ಲಿ ಪೂರ್ಣಗೊಂಡಿದೆ. 

ರೈತರಿಗೆ ಕಾಡುತ್ತಿರುವ ಕೂಲಿಕಾರರ ಸಮಸ್ಯೆ;- ರೈತರು ಯಾವುದೇ ಬೆಳೆ ಮಾಡಲು ರೈತರು ಹೆದರುವುದಿಲ್ಲ. ಅದರೆ ಇತ್ತೀಚಗೆ ಕಾರ್ಮಿಕರು, ಕೂಲಿಕಾರರು ಸಿಗದ ಕಾರಣ ಮನೆಯವರಿಂದ ಎಷ್ಟು ಮಾಡಿಸಲು ಸಾಧ್ಯ ಎಂಬ ಅಲೋಚನೆಯಿಂದ ಬೆಳೆ ಮಾಡುತ್ತಿದ್ದೇವೆ. ಕೈತುಂಬ ಹಣ ನೀಡಿದರೂ ಉಳುಮೆಗೆ ಜನ ಸಿಗುತ್ತಿಲ್ಲ. ಕಳೆದ ೨೫-೩೦ ವರ್ಷಗಳಿಂದಲೂ ಸತತವಾಗಿ ತಂಬಾಕು, ಅಲೂಬೆಳೆಯನ್ನು ಬೆಲೆಯುತ್ತಾ ಬಂದಿದ್ದೇವೆ. ಅದರೆ ಕಳೆದ ವರ್ಷದಿಂದ ಕೂಲಿ ಕಾರ್ಮಿಕರ ತೊಂದರೆಯಿAದ ಅಲೂ ಬೆಳೆ ಕಡಿಮೆ ಮಾಡಿದ್ದೇವೆ ಎನ್ನುತ್ತಾರೆ.                                                           

                                                                     ರೈತ ಮುಖಂಡ ಮುಗಳೂರು ಕೃಷ್ಣೇಗೌಡ.  


Post a Comment

Previous Post Next Post