ಬೇಲೂರು :ಬಹುವರ್ಷದ ಬೇಡಿಕೆಯಾಗಿದ್ದ ತಾಲ್ಲೂಕಿನ ರಣಘಟ್ಟ ಒಡ್ಡು ನೀರಾವರಿ ಕಾಮಗಾರಿಗೆ ರಾಜ್ಯ ಸರಕಾರ ಟೆಂಡರ್ ಕರೆದಿದೆ.
೧೨೮ ಕೋಟಿ ರೂ.ಗಳ ವೆಚ್ಚದ ಈ ಕಾಮಗಾರಿಗೆ ಟೆಂಡರ್ ಅನುಮೋದನೆ ದೊರೆಯುವ ಮೂಲಕ ತಾಲ್ಲೂಕಿನ ಅದರಲ್ಲೂ ಬಯಲು ಸೀಮೆ ಪ್ರದೇಶವಾದ ಹಳೇಬೀಡು, ಮಾದಿಹಳ್ಳಿ ಹೋಬಳಿಯ ಜನತೆಯ ಬಹುವರ್ಷದ ಕನಸು ಇಂದು ಈಡೇರಿದಂತಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ೧೨ನೇ ಶತಮಾನದಲ್ಲಿ ನಿರ್ಮಿಸಿದ್ದ ರಣಘಟ್ಟ ಒಡ್ಡಿನಿಂದ ಹಳೇಬೀಡಿನ ದ್ವಾರಸಮುದ್ರಕ್ಕೆ ನಾಲೆ ಮೂಲಕ ನೀರು ಹರಿಯುತ್ತಿತ್ತು. ಕಾಲಾನುನಂತರದಲ್ಲಿ ಒಡ್ಡು ನಿರ್ಲಕ್ಷ್ಯಕ್ಕೆ ಒಳಗಾಗಿ ನೀರು ಹರಿಯುವುದು ನಿಂತಿತು. ರಣಘಟ್ಟ ಒಡ್ಡು ಪುನಶ್ಚೇತನಗೊಳಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಪುಷ್ಪಗಿರಿ ಶ್ರೀಗಳು, ತರಳಬಾಳು ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು, ರೈತಸಂಘ, ವಿವಿಧ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದಿದ್ದವು.
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಬಜೆಟ್ ಅವಧಿಯಲ್ಲಿ ೧೦೦ ಕೋಟಿ ರೂ. ಅನುದಾನವನ್ನು ಮೀಸಲಿರಿಸಿದ್ದರು. ಇದೀಗ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಮೀಸಲಿಟ್ಟಂತ ೧೦೦ ಕೋಟಿ ರೂ.ಅನುದಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಇಂದು ನಡೆದ ನೀರಾವರಿ ಬೋರ್ಡ್ ಮೀಟಿಂಗ್‌ನಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲು ಅನುಮೋದನೆ ಪಡೆದುಕೊಂಡಿದೆ. ಇದಕ್ಕೆ ಬೊಮ್ಮಾಯಿ, ಮಾಧುಸ್ವಾಮಿ, ವಿಜಯೇಂದ್ರ ಅವರ ಶ್ರಮವೂ ಇದೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಅನುಮೋದನೆ ಪಡೆದು ನೆನೆಗುದಿಗೆ ಬಿದ್ದಿದ್ದಂತ ಕಾಮಗಾರಿಯಲ್ಲಿ ನನ್ನ ಕ್ಷೇತ್ರದ ಈ ರಣಘಟ್ಟ ಒಡ್ಡು ಕಾಮಗಾರಿಗೆ ಮಾತ್ರವೆ ಕಾಮಗಾರಿ ಆರಂಭಗೊಳ್ಳುತ್ತಿರುವುದು ವಿಶೇಷ. ಕುಮಾರಸ್ವಾಮಿ ಅನುಮೋದನೆ ಕೊಟ್ಟಂತ ಯೋಜನೆಯಲ್ಲಿ ಇದೊಂದು ಯೋಜನೆ ಬಿಟ್ಟರೆ ಬೇರೆ ಯಾವುದೆ ಯೋಜನೆ ಕಾಮಗಾರಿಗೆ ಅನುಮೋದನೆ ಆಗಿಲ್ಲ.
ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ರೇವಣ್ಣ ಅವರನ್ನು ಆಹ್ವಾನಿಸಿ ಒಂದೇ ವೇದಿಕೆಯಲ್ಲಿ ಕಾಮಗಾರಿಯನ್ನು ಶಂಕುಸ್ಥಾಪನೆ ನೆರವೇರಿಸಲಾಗುವುದು. ೪.೨೫ ಕಿ.ಮೀಟರ್ ಸುರಂಗದ ಮೂಲಕ ಉಳಿದ ೪.೫ ಕೀ.ಮೀಟರ್ ನಾಲೆ ಮೂಲಕ ನೀರು ಹರಿಸಲಾಗುವುದು. ನೀರು ಹರಿಯಲು ಯಾವುದೆ ರೀತಿಯ ಮೋಟಾರ್ ಅಳವಡಿಸದೆ ನೈಸರ್ಗಿಕವಾಗಿ ಗ್ರಾವಿಟಿ ಪವರ್ ಮೂಲಕ ಹರಿಸಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಹಳೇಬೀಡು ಸುತ್ತಮುತ್ತಲ ೨೦ ಕೆರೆಗಳ ಭರ್ತಿ ಆಗಲಿದೆ. ಇದರ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆ, ಹಿರೆಕಟ್ಟೆ ಒಡ್ಡು, ಜಾವಗಲ್ ಹೋಬಳಿಯ ಎರಡು ಕೆರೆಕಟ್ಟೆ ತುಂಬಿಸಲಾಗುವುದು ಎಂದು ತಿಳಿಸಿದರು.
![]() |
| Advertisement |
ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಹಕಾರ ನೀಡಿದ ಅಂದಿನ ಉಸ್ತುವಾರಿ ಸಚಿವರಾದ ಮಾಧುಸ್ವಾಮಿಯವರಿಗೆ, ಇಂದಿನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ, ಚಿಕ್ಕಮಗಳೂರು ಶಾಸಕರಾದ ಸಿ.ಟಿ.ರವಿ ಹಾಗೂ ಸಂಸದ ಪ್ರಜ್ವಲ್‌ರೇವಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕರು, ರಣಘಟ್ಟ ಒಡ್ಡು ಹೋರಾಟದ ಸಂದರ್ಭ ನನ್ನ ಮಗ ಅಪಘಾತದಲ್ಲಿ ಮೃತಪಟ್ಟಿದ್ದು ಮರೆಯಲಾಗದೆ ನೋವಾಗಿದ್ದು, ಇಂದು ಅಂದಿನ ಹೋರಾಟಕ್ಕೆ ಜಯಸಿಕ್ಕಿದೆ. ಬಿಜೆಪಿ, ಜೆಡಿಎಸ್ ಎನ್ನುವ ಬೇದಭಾವವಿಲ್ಲ. ಎಲ್ಲರೂ ಸಮಾನವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
![]() |
| Advertisement |


