ಹಾಸನದಲ್ಲಿ ದಿನಪೂರ್ತಿ ಮಳೆಗೆ ಜನಜೀವನ ಅಸ್ತವ್ಯಸ್ತ

ಹಾಸನ: ಇತ್ತ ಜೋರಾಗಿ ಬಾರದೆ ಮತ್ತು ಅತ್ತ ಕಡೆ ನಿಲ್ಲದೆ ದಿನ ಪೂರ್ತಿ ಸುರಿಯುತ್ತಿರುವ ಮಳೆಗೆ ಹಾಸನ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.



     ಅಷಾಢ ಶುರುವಾದ ದಿನದಿಂದಲೂ ಜಿಲ್ಲೆಯಲ್ಲಿ ಮಳೆಯು ಹೆಚ್ಚಾಗಿ ಬರುತ್ತಿದ್ದು, ಕಳೆದ ಮರ‍್ನಾಲ್ಕು ದಿನಗಳಿಂದ ಮಳೆಯೂ ಹೆಚ್ಚಾಗಿಯೇ ಬರುತ್ತಿದೆ. ದಿನ ಪೂರ್ತಿ ಮಳೆಯೂ ಬರುತ್ತಿರುವುದರಿಂದ ಕಚೇರಿಗೆ ತೆರಳಲು ಅನೇಕರು ಕಾರಿನಲ್ಲಿ ಹೋದರೇ, ಮತ್ತೆ ಕೆಲವರು ಆಟೋ ಹಾಗೂ ಮಳೆಯಲ್ಲೆ ನೆನೆದುಕೊಂಡು, ಮತ್ತೆ ಕೆಲವರು ಕೊಡೆ ಆಶ್ರಯದಲ್ಲಿ ಹೋಗಬೇಕಾಯಿತು. ಇನ್ನು ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುವವರ ಪಾಡಂತು ಕೇಳಬಾರದು. ಒಂದು ಕೊಡೆಯನ್ನು ಹಿಡಿದು ಪೂರ್ತಿ ದಿನ ಮಳೆಯಲ್ಲೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ರಸ್ತೆಗಳಲ್ಲಿ ಇರುವ ಗುಂಡಿ ತುಂಬ ನೀರು ತುಂಬಿತ್ತು. ಮಳೆ ಕಾರಣಕ್ಕೆ ಅನೇಕರು ಮನೆಯಿಂದ ಹೊರಗೆ ಬಾರದೇ ರಾತ್ರಿವರೆಗೂ ಕಾಲ ಕಳೆದರು. ಹಗಲು ಸಮಯದಲ್ಲೂ ಮೋಡ ಕವಿದ ವಾತವರಣ ನಿರ್ಮಾಣವಾಗಿದ್ದರಿಂದ ಕತ್ತಲಿ ಆದಂತೆ ಗೋಚರಿಸಿದ್ದರಿಂದ ವಾಹನ ಚಾಲಕರು ಹೆಡ್ ಲೈಟ್ ಹಾಕಿಕೊಂಡೆ ಸಂಚರಿಸಿದರು. 


Post a Comment

Previous Post Next Post