ಬಾಬು ಜಗಜೀವನ್ ರಾಮ್ ರವರ ಸಮಾಜವಾದಿ ತತ್ವಗಳನ್ನು ಯುವಜನತೆಯು ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ

 ಮಂಡ್ಯ. ಜು.06 :-  ಸಮಾಜದಲ್ಲಿ  ಶೋಷಿತರ ಪರವಾಗಿ ಹೋರಾಟ ಮಾಡಿದ್ದ  ಡಾ.ಬಾಬು ಜಗಜೀವನ್ ರಾಮ್ ರವರ ಜೀವನಾದರ್ಶಗಳನ್ನು ಮತ್ತು ಸಮಾಜವಾದಿ ತತ್ವಗಳನ್ನು ಯುವಜನತೆಯು ಜೀವನದಲ್ಲಿ ಅಳವಡಿಸಿಕೊಳ್ಳಿ  ಎಂದು ಜಿಲ್ಲಾಧಿಕಾರಿಗಳಾದ ಎಸ್.ಅಶ್ವಥಿರವರು ಹೇಳಿದರು.

 ಇಂದು ಬಾಬು ಜಗಜೀವನ್ ರಾಮ್ ರವರ 35ನೇ ಪುಣ್ಯತಿಥಿಯ ಪ್ರಯುಕ್ತ ಜಿಲ್ಲಾಧಿಕಾರಿಗಳ ಮುಂಭಾಗದ ಕಾವೇರಿ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು   ಜಗಜೀವನ್ ರಾಮ್ ರವರು ಸ್ವಾತಂತ್ರ್ಯ ಹೋರಾಟಗಾರರು  ಹಾಗೂ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

 ಅಸ್ಪೃಶ್ಯರಿಗೆ ಸಮಾನತೆಯನ್ನು ಸಾಧಿಸಲು ಅವರು ಪ್ರಮುಖ ಪಾತ್ರ ವಹಿಸಿದರು ಹಾಗೂ ಅವರು ಗ್ರಾಮೀಣ ಕಾರ್ಮಿಕ ಚಳವಳಿಯನ್ನು ಸಂಘಟಿಸಿದರು ಹಾಗೂ ಸಾಮಾಜಿಕ ನ್ಯಾಯವನ್ನು ಸಂವಿಧಾನದಲ್ಲಿ ಪ್ರತಿಪಾದಿಸಿದ್ದಾರೆ ಅವರ ಸ್ಮರಣೆ ಅರ್ಥಪೂರ್ಣ ಎಂದರು.

  ಅವರು ಕೃಷಿ ಮಂತ್ರಿಯಾದ ಅಂತಹ ಸಂದರ್ಭದಲ್ಲಿ ಅವರ ಕೊಡುಗೆ ಭಾರತದಲ್ಲಿ ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯನ್ನು ಆಧುನೀಕರಿಸಿ, ವಿಶೇಷವಾಗಿ ಬರಗಾಲದ ಸಮಯದಲ್ಲಿ ಆಹಾರ ಬಿಕ್ಕಟ್ಟನ್ನು ಎದುರಿಸಲು ಸಲಹೆ ನೀಡಿದ್ದನ್ನು ಸ್ಮರಿಸಿದರು.

  ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಜಿ.ಪಂ ಸಿ.ಇ.ಒ ದಿವ್ಯ ಪ್ರಭು, ಸಮಾಜಕಲ್ಯಾಣಾಧಿಕಾರಿ ರಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ್, ಅರಣ್ಯಧಿಕಾರಿ ವೆಂಕಟೇಶ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕಾವ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post