ತಗರೆ ಅರಣ್ಯಕ್ಕೆ ಹಸಿರುಭೂಮಿ ಪ್ರತಿಷ್ಠಾನದಿಂದ ಬೀಜದ ಉಂಡೆ

 ಬೇಲೂರು :ಇಲ್ಲಿನ ಹಸಿರುಭೂಮಿ ಪ್ರತಿಷ್ಠಾನದ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆಯಿಂದ ಪ್ರಮುಖರು ತಗರೆ ಅರಣ್ಯ ಪ್ರದೇಶದಲ್ಲಿ ಬೀಜದ ಉಂಡೆ ಎಸೆಯುವ ಕಾರ್ಯಕ್ರಮ ನಡೆಸಿದರು.

ಬೇಲೂರು ತಾ.ತಗರೆ ಅರಣ್ಯ ಪ್ರದೇಶದಲ್ಲಿ ಹಸಿರುಭೂಮಿ ಪ್ರತಿಷ್ಠಾನದಿಂದ ಬೀಜದ ಉಂಡೆ ಎಸೆಯುವ ಕಾರ್ಯಕ್ರಮ ನಡೆಸಲಾಯಿತು

ಈ ಸಂದರ್ಭ ಮಾತನಾಡಿದ ಪ್ರತಿಷ್ಠಾನದ ಸೌಭಾಗ್ಯ ಮಾತನಾಡಿ, ನಾವು ಹಾಕುವ ಬೀಜವೆಲ್ಲವೂ ಮೊಳಕೆ ಒಡೆಯುವುದಿಲ್ಲ. ಆದರೆ ನಾವು ೧೦೦ ಬೀಜ ಎಸೆದರೆ ಅದರಲ್ಲಿ ೧೦ ಬೀಜ ಮೊಳಕೆ ಒಡೆದರೆ ಉತ್ತಮ. ಅರಣ್ಯ ಇಲಾಖೆಯ ನಾಗರಾಜ್ ಮಾತನಾಡಿ, ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ವ್ಯರ್ಥವಾಗುವುದಿಲ್ಲ. ನಾವು ಪರಿಸರ ಉಳಿಸಬೇಕೆಂದರೆ ಇಂತಹ ಕಾರ್ಯಕ್ರಮ ಹೆಚ್ಚಾಗಬೇಕು. ಸಂಘಟನೆ ಕಾರ್ಯಕರ್ತರು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಉಪನ್ಯಾಸಕ ಮಹೇಶ್ ಮಾತನಾಡಿದರು, ಉಧ್ಯಮಿ ಸಂತೋಷ್‌ಕೆಂಚಾಂಭ, ಅಂತೋಣಿಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಅರಣ್ಯ ಇಲಾಖೆಯ ಡಿಆರ್‌ಒ ಮಂಜೇಗೌಡ, ಬಿ.ವಿ ನಾಗರಾಜ್, ಉಪನ್ಯಾಸಕ ವೀರಭದ್ರಪ್ಪ, ಮಹೇಶ್, ಶೇಷಪ್ಪ, ಶಿವಣ್ಣ, ಶಂಕರ್, ಸಂಪತ್‌ಕುಮಾರ್ ಇತರರು ಇದ್ದರು.

Advertisement


Post a Comment

Previous Post Next Post