ನಾಳೆಯಿಂದ ಬೇಲೂರು ಚನ್ನಕೇಶವ ದೇಗುಲ ಓಪನ್ : ಮಾರ್ಗಸೂಚಿ ಕಡ್ಡಾಯ

 ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದ ರಥೋತ್ಸವ ರದ್ದಾಗಿತ್ತಾದರೂ ಭಕ್ತರು ರಥೋತ್ಸವ ನಿಲ್ಲಬಾರದೆಂಬ ಕಾರಣದಿಂದ ದೇಗುಲದ ಸುತ್ತಲಿನ ರಥ ಸಾಗುವ ೪ ಬೀದಿಗಳಲ್ಲಿ ೪ ಜನ ಭಕ್ತರು ಪುಟ್ಟ ರಥವನ್ನು ಎಳೆದು ಭಕ್ತಿ ಸಮರ್ಪಿಸಿದ್ದರು.

 ಎರಡನೆ ಅವಧಿಯ ಕೊರೊನಾ ಅಲೆಯಲ್ಲಿ ರಥೋತ್ಸವ ರದ್ದಾದ ಸಂದರ್ಭ, ರಥೋತ್ಸವ ನಿಲ್ಲಬಾರದೆಂಬ ಕಾರಣಕ್ಕೆ ದೇಗುಲದ ಒಳ ಆವರಣದಲ್ಲಿ ಕೆಲವೆ ಭಕ್ತರು ಹಾಗೂ ಅಧಿಕಾರಗಳ ಸಮ್ಮುಖದಲ್ಲಿ ಪುಟ್ಟ ರಥದಲ್ಲಿ ದೇವರನ್ನು ಪ್ರತಿಷ್ಟಾಪಿಸಿ ರಥ ಎಳೆಯಲಾಯಿತು. 

ಇನ್ನೂ ದೇಗುಲದ ಬಾಗಿಲು ಸೋಮವಾರದಿಂದ ತೆರೆಯುತ್ತಿರುವುದು ಭಕ್ತರಿಗೆ ಹರ್ಷವಾಗಿದ್ದು, ಈ ಬಗ್ಗೆ ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ವಿದ್ಯುಲತಾ  ಮಾಹಿತಿ ನೀಡಿದ್ದಾರೆ. ಸೋಮವಾರ ಸೋಮವಾರ ಬೆಳಿಗ್ಗೆ 7 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಅಪಾರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರಲ್ಲದೆ, ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬರು ಮಾದ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದ್ದಾರೆ.

______________

ವರದಿ: ಅನಂತರಾಜೇಅರಸು, ಬೇಲೂರು.



ಬೇಲೂರು ಶ್ರೀಚನ್ನಿಗನಿಗೆ ವಿಶೇಷ ಅಲಂಕಾರ: ನಿಲ್ಲದ ನಿತ್ಯಪೂಜೆ

ಬೇಲೂರು ಶ್ರೀಚನ್ನಕೇಶವಸ್ವಾಮಿ ದೇವರಿಗೆ ಶನಿವಾರ ವಿಶೇಷ

ಅಲಂಕಾರ ಮಾಡಿ ಪೂಜಿಸಲಾಗಿದೆ


ಬೇಲೂರು: ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದಲ್ಲಿ ಲಾಕ್‌ಡೌನ್ಆದಾಗಿನಿಂದ ಭಕ್ತರಿಗೆ ಪ್ರವೇಶ ನಿರ್ಬಂಧ ಇದ್ದರೂ ದೇವರ ಪೂಜೆಗೆ ಅಡ್ಡಿಯಾಗಿಲ್ಲ.ಕೊರೊನಾ ಮೊದಲನೆ ಅಲೆಯ ವೇಳೆಯಿಂದ ಎರಡನೆ ಅಲೆಯ ಇದುವರಗೆ ಎರಡು ವರ್ಷ ವಿಜೃಂಭಣೆಯ ರಥೋತ್ಸವಕ್ಕೆ ಅವಕಾಶ ಆಗದಿದ್ದರೂ ಮೊದಲ ವರ್ಷದ ರಥೋತ್ಸವದಂದು ದೇಗುಲದ ಹೊರಭಾಗದ ರಥ ಸಾಗುವನಾಲ್ಕು ಬೀದಿಗಳಲ್ಲಿ ಪುಟ್ಟದಾದ ರಥವನ್ನು ನಾಲ್ಕು ಜನಭಕ್ತಬಾಲಕರು ಎಳೆದು ರಥೋತ್ಸವ ಮುಗಿಸಿದ್ದರು.


ಕೊರೊನಾ ಎರಡನೆ ಅಲೆಯ ದಿಸೆಯಿಂದ ರಥೋತ್ಸವಕ್ಕೆಅವಕಾಶ ಇಲ್ಲವಾಯಿತು. ಆದರೆ ಎರಡು ವರ್ಷ ರಥೋತ್ಸವಸ್ಥಗಿತಗೊಳಿಸಿದರೆ ಮೂರನೆ ವರ್ಷದ ರಥೋತ್ಸವವನ್ನೂ ನಿಲ್ಲಿಸಬೇಕಾಗುತ್ತದೆ ಎಂಬ ದೇಗುಲದ ನಿಯಮದಿಂದ ವಿಚಲಿತರಾದಭಕ್ತರು ಹಾಗೂ ಅರ್ಚಕ ಸಮೂಹ ದೇಗುಲದೊಳಗೆಸರಳವಾಗಿ ಪುಟ್ಟ ರಥೋತ್ಸವವನ್ನು ಅರ್ಥಪೂರ್ಣವಾಗಿಯಾವುದೆ ರೀತಿಯ ಪೂಜಾಕಾರ್ಯಕ್ಕೆ ಅಡ್ಡಿ ಇಲ್ಲದಂತೆನಡೆಸಲಾಯಿತು.ಕೊರೊನಾ ಆರಂಭದಿAದಲೂ ಅಂದರೆ ದೇಗುಲ ಲಾಕ್‌ಡೌನ್ಆದಂದಿನಿಂದಲೂ ದೇವರ ಪೂಜಾಕಾರ್ಯಕ್ಕೆ ತೊಡಕಾಗದಂತೆಪ್ರತಿನಿತ್ಯ ಆಗಮಿಕ ಅರ್ಚಕರಾದ ಕೃಷ್ಣಸ್ವಾಮಿಭಟ್ಟರ್ ಹಾಗೂಶ್ರೀನಿವಾಸಭಟ್ಟರ್ ನೇತೃತ್ವದ ಅರ್ಚಕರ ಸಮೂಹ ಪೂಜೆಸಲ್ಲಿಸುತ್ತಿದ್ದು ವಿಶೇಷ ದಿನದಂದು ದೇವರಿಗೆ ವಿಶೇಷ ಅಲಂಕಾರಮಾಡಿ ಪೂಜಿಸುವುದು ನಡೆಯುತ್ತಿದೆ. ಆಶಾಢ ಅಮಾವಾಸ್ಸೆ ದಿನವಾದ ಶನಿವಾರರೂ ಸಹ ದೇವರಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು ದೇಗುಲದವತಿಯಿಂದ ದೇವರ ಅಲಂಕಾರದ ಚಿತ್ರ ಭಕ್ತರಿಗೆ ಲಭ್ಯವಾಗಿದೆ.




Post a Comment

Previous Post Next Post