ಜಯಕರ್ನಾಟದಿಂದ ಯೋಧರಿಗೆ ಗೌರವಸಮರ್ಪಣೆ

 ಬೇಲೂರು:೨೨ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ತಾಲೂಕು ಜಯಕರ್ನಾಟಕ ಸಂಘಟನೆಯಿಂದ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಮೇಣದ ಬತ್ತಿಗಳನ್ನು ಹಚ್ಚಿ ಹುತಾತ್ಮ ಯೋದರಿಗೆ ಗೌರವ ಸಲ್ಲಿಸಲಾಯಿತು.

ಬೇಲೂರಿನಲ್ಲಿ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಮೇಣದ ಬತ್ತಿಗಳನ್ನು ಹಚ್ಚಿ ಹುತಾತ್ಮ ಯೋದರಿಗೆ ತಾಲೂಕು ಜಯ ಕರ್ನಾಟಕ ಸಂಘಟನೆಯಿಂದ ಗೌರವ ಸಲ್ಲಿಸಿದರು.


ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಸೋಮೇಶ್ ಮಾತನಾಡಿ, ದೇಶ ಕಾಪಾಡಲು ಜೀವವನ್ನೆ ಪಣಕ್ಕಿಟ್ಟು ೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಹೋರಾಡಿ ಭಾರತಕ್ಕೆ ಜಯ ತಂದು ಕೊಟ್ಟ ನಮ್ಮ ದೇಶದ ವೀರ ಯೋಧರ ಸೇವೆ ಸ್ಮರಿಸುವ ಕೆಲಸ ಎಲ್ಲರದ್ದಾಗಿದೆ ಎಂದರು.

Advertisement


ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ನಾವು ದೇಶದೊಳಗೆ ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಯೋಧರೆ ಕಾರಣ. ದೇಶ ಕಾಯುವ ವೀರ ಯೋಧರ ಹಾಗೂ ಅವರ ಕುಟುಂಬದವರ ಆರೋಗ್ಯ ಕಾಪಾಡಲಿ ಎಂದು ಭಾರತೀಯರಾದ ನಾವು ಪ್ರತಿನಿತ್ಯ ಪ್ರಾರ್ಥಿಸಬೇಕಿದೆ. ೬೦ ದಿನಗಳ ಕಾಲ ಪಾಕಿಸ್ತಾನದ ವಿರುದ್ದ ಕಾರ್ಗಿಲ್‌ನಲ್ಲಿ ನಡೆದ ಯುದ್ದದಲ್ಲಿ ಕೆಲ ಸೈನಿಕರು ಹುತಾತ್ಮರಾದರೆ, ಕೆಲವರು ಗಾಯಗೊಂಡು ಅಂಗವಿಕಲರಾಗಿದ್ದಾರೆ. ಇತರೆ ಯೋಧರು ತಮ್ಮ ಪ್ರಾಣದ ಹಂಗನ್ನು ತೊರೆದು ದೇಶಕ್ಕಾಗಿ ಹೊರಾಡಿ ವಿಜಯ ಪತಾಕೆ ಹಾರಿಸಿದ್ದಾರೆ. ಇಂತಹ ವೀರ ಯೋಧರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದರು.

Advertisement


ಜಯ ಕರ್ನಾಟಕ ಸಂಘಟನೆ ತಾಲೂಕು ಕಾಯಾಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ಶ್ರೇಯಸ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಘಟನೆಯ ಪಾಪಣ್ಣಿ, ಗಂಗಾಧರ್, ಜಗಧೀಶ್, ಮುರುಗೇಶ್, ಮಂಜುನಾಥ್ ಇನ್ನಿತರರಿದ್ದರು.


Post a Comment

Previous Post Next Post