ಬೇಲೂರು`: ಮನೆಗೊಂದು ಮರ ಊರಿಗೊಂದು ವನ' ಎಂಬAತೆ ಪ್ರತಿಯೊಬ್ಬರೂ ತಮ್ಮ ಮನೆಯ ಬಳಿ ಗಿಡ ನೆಡುವ ಮೂಲಕ ಈ ನಾಡನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
![]() |
| ಬೇಲೂರು ತಾಲ್ಲೂಕು ಚನ್ನೇನಹಳ್ಳಿ ಗ್ರಾಮದ ಶ್ರೀಸತ್ಯಸಾಯಿನಿಕೇತನ ವಿದ್ಯಾಸಂಸ್ಥೆಯಿAದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡಲಾಯಿತು ಹಾಗೂ ಸತ್ಯಸಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು |
ತಾಲೂಕಿನ ಚನ್ನೇನಹಳ್ಳಿ ಗ್ರಾಮದ ಶ್ರೀಸತ್ಯಸಾಯಿನಿಕೇತನ ವಿದ್ಯಾಸಂಸ್ಥೆಯಿAದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯಸಾಯಿ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಉಚಿತವಾಗಿ ವಸತಿ ಸಹಿತ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಈಗಾಗಲೆ ಎಂತಹ ತುರ್ತು ಸಂಧರ್ಭದಲ್ಲಿಯೂ ಸಮಾಜದ ಒಳಿತಿಗಾಗಿ ಸತ್ಯಸಾಯಿ ಸೇವಾ ಸಂಸ್ಥೆಯು ಮುಂದಾಗುವುದರ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರದ ಬಗ್ಗೆ ವಿಷೇಶ ಆಸಕ್ತಿಯನ್ನು ಇಟ್ಟುಕೊಂಡಿದೆ.ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳಡಸುವ ಮೂಲಕ ವಾತಾವರಣ ಶುದ್ಧಗೊಳಿಸುವ ಕೆಲಸ ಮಾಡಬೇಕಿದೆ. ನಮ್ಮ ದೇಶದಲ್ಲಿ ಎಲ್ಲಾ ಹಬ್ಬಗಳಂತೆ ಈ ವನಮಹೋತ್ಸವ ಹಬ್ಬವನ್ನು ಎಲ್ಲಾ ಇಲಾಖೆಯವರೂ ಆಚರಿಸುತ್ತಿರುವುದು ನಿಜಕ್ಕೂ ಹರ್ಷದಾಯಕ.ಪ್ರತಿಯೊಬ್ಬರೂ ತಮ್ಮ ಅಕ್ಕ ಪಕ್ಕ ದಲ್ಲಿ ಮರಗಿಡಗಳನ್ನು ಬೆಳೆಸಬೇಕು, ಈ ವಿದ್ಯಾಸಂಸ್ಥೆಯು ತಮ್ಮ ಸ್ವಂತ ಟ್ರಸ್ಟ್ ಸ್ಥಾಪಿಸಿ ಬಡವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಈಗಾಗಲೇ ತಾಲೂಕು ಆಡಳಿತಕ್ಕೆ ಹೆಚ್ಚಿನ ಅಭಿವೃದ್ಧಿ ಪಡಿಸಲು ಎರಡು ಎಕರೆ ಜಮೀನನ್ನು ಮಂಜೂರು ಮಾಡಲು ಕೇಳಿರುವುದರಿಂದ ಆ ಟ್ರಸ್ಟ್ಗೆ ಭೂಮಿಯನ್ನು ಮಂಜೂರು ಮಾಡಲಾಗುವುದು ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಭೂಮಿಯ ತಾಪಮಾನ ಏರಿಕೆಯಿಂದಾಗಿ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮರಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಹಾಗೂ ಪ್ರಾಣಿಗಳಿಗೂ ಉಪಯೋಗವಾಗುವುದರಿಂದ ಮರಗಳನ್ನು ಬೆಳೆಸಬೇಕು. ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಭವಿಷ್ಯದ ಪೀಳಿಗೆಗಾದರೂ ಪರಿಸರ ಸಂರಕ್ಷಣೆ ಮಾಡಬೇಕು. ಈ ವಿದ್ಯಾಸಂಸ್ಥೆಗೆ ಅಭಿವೃದ್ಧಿ ಗಾಗಿ ನನ್ನ ಶಾಸಕರ ಅನುದಾನದಲ್ಲಿ ೫ ಲಕ್ಷ ನೀಡುವುದರ ಜೊತೆಗೆ ಈ ಭಾಗದ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಇದೇ ವೇಳೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕಾವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಕವಿತಾರಾಜನ್, ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮೋಹನ್‌ಕುಮಾರ್, ಸತ್ಯಸಾಯಿ ನಿಕೇತನ ಟ್ರಸ್ಟ ಅಧ್ಯಕ್ಷ ಕಾಳೇಗೌಡ, ಡಿಎಫ್‌ಓ ಅನುಪಮಾ, ಉಪತಹಶೀಲ್ದಾರ್ ನಾಗರಾಜ್, ಬಳ್ಳೂರುಉಮೇಶ್, ಪ್ರಾಂಶುಪಾಲ ವೆಂಕಟೇಶ್‌ಕಾಮತ್, ಟ್ರಸ್ಟ್ನ ಅಧ್ಯಕ್ಷ್ಯ ಗೋವಿಂದರೆಡ್ಡಿ, ಬಾಳೆಹಣ್ಣು ರಮೇಶ್ ಇನ್ನು ಮುಂತಾದವರು ಹಾಜರಿದ್ದರು.
ಹಾಸನ ಸೀಮೆ ನ್ಯೂಸ್, ಬೇಲೂರು ಅನಂತರಾಜೇ ಅರಸು.
