ಬೇಲೂರು : ಕೊರೊನಾ ಸಾವು ಪ್ರಕರಣ ಇಳಿಮುಖ ಕಂಡಿದೆಯೆಂ ಬ ಆಶಾಭಾವನೆಯ ನಡುವೆಯೆ ಇಂದು ತಾಲ್ಲೂಕಿನಲ್ಲಿ ಮಹಿಳೆಯೊರ್ವರು ಕೊರೊನಾದಿಂದ ಮೃತಪಟ್ಟಿದ್ದಾರೆ.
![]() |
| ಬೇಲೂರು ತಾ.ಚಿಲ್ಕೂರುಹೊಸಹಳ್ಳಿ ಗ್ರಾಮದಲ್ಲಿ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ತೊಡಗಿರುವ ೨೪ x ೭ ತಂಡದ ಸದಸ್ಯರು |
ತಾಲ್ಲೂಕಿನ ಚಿಲ್ಕೂರು ಹೊಸಹಳ್ಳಿಯ ಮಹಿಳೆಯೊಬ್ಬರು ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರವನ್ನು ಪಟ್ಟಣದ ೨೪ x ೭ ತಂಡದ ಸದಸ್ಯರು ನೆರೆವೇರಿಸಿದ್ದಾರೆ. ಮಹಿಳೆಯ ಕುಟುಂಬ ಸದಸ್ಯರು ೨೪ x ೭ ತಂಡವನ್ನು ಸಂಪರ್ಕಿಸಿ ಅಂತ್ಯ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದರು. ತಂಡದ ಸದಸ್ಯರು ತಮ್ಮದೆ ಆದ ಆಂಬ್ಯುಲೆನ್ಸ್ ತೆಗೆದುಕೊಂಡು ಗ್ರಾಮಕ್ಕೆ ತೆರಳಿ ನಿಯಮದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಲ್ಲದೆ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು.
ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ಆಂಬ್ಯುಲೆನ್ಸ್ ಚಂದ್ರು ನೆರವೇರಿಸಿದರು. ಅಂತ್ಯ ಸಂಸ್ಕಾರ ನಡೆದ ಸ್ಥಳ ಹಾಗೂ ಆಗಮಿಸಿದ್ದ ಕುಟುಂಬ ಸದಸ್ಯರಿಗೆ, ಗ್ರಾಮಸ್ಥರಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ೨೪ x ೭ ತಂಡದ ಸದಸ್ಯರಾದ ನೂರ್‌ಅಹ್ಮದ್, ಮುಜಾಮಿಲ್ ಪಾಷಾ, ಸಂಪತ್‌ಮಾಸ್ಟರ್, ಅಸ್ಗರ್‌ಅಲಿ ಅಂತ್ಯ ಸಂಸ್ಕಾರದ ಜವಾಬ್ದಾರಿ ಹೊತ್ತಿದ್ದರು.
