ಬೇಲೂರು ತಾಲ್ಲೂಕು ದೊಡ್ಡಕೋಡಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದಲ್ಲಿ ಎತ್ತಿನ ಹೊಳೆ ಭಾದಿತ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ 1 ಕೋಟಿ ರೂ ವೆಚ್ಚದ ರಸ್ತೆ ಹಾಗೂ ಬಾಕ್ಸ ಚರಂಡಿ ಕಾಮಗಾರಿಗೆ ಶಾಸಕ ಕೆ ಎಸ್ ಲಿಂಗೇಶ್ ಭೂಮಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿದ ಶಾಸಕ ಲಿಂಗೇಶ್ ಎತ್ತಿನ ಹೊಳೆ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದ್ದು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲಿ ಹಣಮೀಸಲಿಟ್ಟಿತ್ತು ಕರೋನಾ
ಪ್ರಕೃತಿ ವಿಕೋಪದಿಂದ ಆರ್ಥಿಕ ಪರಿಸ್ಥಿತಿ ಕನಿಷ್ಠಕ್ಕೆ
ಬಂದ ಹಿನ್ನೆಲೆ ಹಣ ಬಿಡುಗಡೆಗೊಂಡಿರಲಿಲ್ಲ ಈ ವಿಷಯವಾಗಿ ಅಧಿವೇಶನ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ
ನವರ ಗಮನಕ್ಕೆ ತರಲಾಗಿತ್ತು ತದ ನಂತರ ಬಿಡುಗಡೆಯಾದ ಹಣದಲ್ಲಿ ಕ್ಷೇತ್ರದಲ್ಲಿ ಸುಮಾರು
19 ಗ್ರಾಮಪಂಚಾಯತಿಯಲ್ಲಿ ಸುಮಾರು 20 ಕೋಟಿ ಹಣ ಬಿಡುಗಡೆ ಗೊಳಿಸಿ ಕಾಮಗಾರಿ ನಡೆಯುತ್ತಿವೆ ಇನ್ನು ಈ ಗ್ರಾಮಕ್ಕೆ 90 ಲಕ್ಷ ಅನುದಾನ ಬರಲಿದ್ದು ಈ ಊರಿನ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಮಾಡಲಾಗುವುದೆಂದರು.
ಎ ಇ ವಿವೇಕ್ ಮಾತನಾಡಿ 1 ಕೋಟಿ ವೆಚ್ಚದಲ್ಲಿ
ದೊಡ್ಡಕೋಡಿಹಳ್ಳಿ ಗ್ರಾಮ ಪಂಚಾಯತಿಯ ಸುಮಾರು 7 ಹಳ್ಳಿಗಳನ್ನು ಸೇರಿಸಲಾಗಿದೆ ಹಿರೇಹಳ್ಳಿಗ್ರಾಮದಲ್ಲಿ370 ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ 120 ಮೀಟರ್ ಬಾಕ್ಸ್ ಚರಂಡಿ ನಿರ್ಮಿಸಲಾಗುವುದೆಂದರು.
![]() |
| Advertisement |
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ಸದಸ್ಯರಾದ ಮೋಹನ್, ಸರೋಜಮ್ಮ ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದಗಂಗೂರು ರಂಗೇಗೌಡ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವಯ್ಯ ಗ್ರಾಮಸ್ಥರಾದ ನಿಂಗಪ್ಪ, ಶಂಕರಲಿಂಗಪ್ಜ,ನಂಜೇಶಣ್ಣ, ಪುಟ್ಟಸ್ವಾಮಿ ಜೆ ಜಿ ತಿಮ್ಮೇಗೌಡ,ವೇಣು ಹಾಗೂ ಜೆ ಡಿ ಎಸ್ ನ ಅನೇಕ ಮುಖಂಡರು ಉಪಸ್ಥಿತಿಯಿದ್ದರು.

