ಬೇಲೂರಿನಲ್ಲಿ ರೈತರಿಂದ ಪ್ರತಿಭಟನೆ: ಸಾಲಾ ಮನ್ನಾಕ್ಕೆ ಒತ್ತಾಯ

 ಬೇಲೂರು:ರೈತರು ಪಡೆದಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡುವಂತೆ ಆಗ್ರಹಿಸಿ ಇಲ್ಲಿ ರಾಜ್ಯ ರೈತಸಂಘ ಹಸಿರು ಸೇನೆ ರೈತ ಸಂಘದಿಂದ ಸೋಮವಾರ



ಎತ್ತಿನಗಾಡಿ, ಟ್ರಾö್ಯಕ್ಟರ್  ರ‍್ಯಾಲಿಯೊಂದಿಗೆ ಪ್ರತಿಭಟನೆ ನಡೆಸಲಾಯಿತು.


ಶ್ರೀಚನ್ನಕೇಶವಸ್ವಾಮಿ ದೇವಾಲಯದ ಮುಂಭಾಗದಿಂದ ಆಗಮಿಸಿದ ಪ್ರತಿಭಟನಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಾಗೂ ಸ್ಥಳೀಯ ಶಾಸಕರ ವಿರುದ್ಧ ದಿಕ್ಕಾರ ಕೂಗಿದರು. ಆನಂತರ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರುಸ್ವಾಮಿಗೌಡ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸರ್ಪ್ರೈಸಿ ಕಾಯ್ದೆ ಜಾರಿ ಮಾಡುವ ಮೂಲಕ ರೈತರ ಭೂಮಿಯನ್ನ ಹರಾಜು ಮಾಡುವ  ಕೆಲಸಕ್ಕೆ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾಫಿ ಬೆಳಗಾರರಿಗೆ ಈ ಕಾಯ್ದೆಯ ಮೂಲಕ ನೋಟಿಸ್ ನೀಡಲಾಗಿದೆ. ರೈತರಿಗೆ ಈಗಾಗಲೆ ಮಾರಕವಾದ ಹಲವು ಕೃಷಿ  ಮಸೂದೆಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ.

ವಿಶ್ವ ವಾಣಿಜ್ಯ ಒಪ್ಪಂದ ಮಾಡಿಕೊಂಡ ಪರಿಣಾಮ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾಗಿದೆ. ವಿದ್ಯುತ್ತ್ ಖಾಸಗಿಕಾರಣ, ರಸಗೊಬ್ಬರ, ಬಿತ್ತನೆಬೀಜ, ಕ್ರಿಮಿ ಕೀಟನಾಶಾಕಗಳು, ಪೆಟ್ರೋಲ್, ಡೀಸೆಲ್, ಹಾಗೂ ಕೃಷಿ ಉಪಕಾರಣಗಳು ಬೆಲೆ ಏರಿಕೆ ದುಪ್ಪಟ್ಟು ಆಗಿದೆ. ಆರ್.ಸಿ.ಈ.ಪಿ. ಒಪ್ಪಂದಗಳು ರೈತರ ಅಂತ್ಯಕ್ಕೆ ಕಾರಣವಾಗಿದೆ. ಈಗಾಗಲೇ ಈ ಕಾಯ್ದೆಗಳನ್ನು ವಿರೋಧಿಸಿ ಕಳೆದ ಏಳೆಂಟು ತಿಂಗಳಿಂದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ಬೃಹತ್ ಮಟ್ಟದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಸಹ ಈ ಸರ್ಕಾರಕ್ಕೆ  ಮಾತನಾಡಿಸುವ ಸೌಜನ್ಯವೂ ಇಲ್ಲ ಎಂದು ಟೀಕಿಸಿದರು.


ರೈತರ ಕಷ್ಟ ಕೇಳುವುದನ್ನು ಬಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕಲು ರಸ್ತೆಗೆ ಮಳೆ ಹೊಡೆಯುವುದು. ಮುಳ್ಳುತಂತಿಗಳನ್ನು ಅಳವಡಿಸುವುದು. ಜಲ ಫಿರಂಗಿಗಳನ್ನು ಬಳಸುವ ಮೂಲಕ ಅತ್ಯಂತ ಕೀಳುಮಟ್ಟದಲ್ಲಿ ಬ್ರಿಟಿಷರ ಸರ್ಕಾರಕ್ಕಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ನಮ್ಮನ್ನ ಆಳುವ ಸರ್ಕಾರಗಳ ದರ್ಪಕ್ಕೆ ಸಿಲುಕಿ ಈಗಾಗಲೇ ೧೫೦ ಕ್ಕೂ ಹೆಚ್ಚಿನ ರೈತರು ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗಿದ್ದಾರೆ. ರೈತರ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಧ್ವನಿ ಎತ್ತದಿರುವುದು ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement


ರೈತ ಸಂಘದ ಅಂತರಾಷ್ಟ್ರೀಯ ಪ್ರತಿನಿಧಿ ಕೆ.ಎಂ.ರಾಜೇಗೌಡ ಮಾತನಾಡಿ, ಭಾರತದಲ್ಲಿ ರೈತರನ್ನು ಕಡೆಗಣಿಸಿ ವಿದೇಶಿ ಕಂಪೆನಿಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಹಲವು ದೇಶದಲ್ಲಿ ಆಹಾರದ ಕೊರತೆ ಉಂಟಾದ ಸಂದರ್ಭ ಭಾರತದಲ್ಲಿ ಕೊರತೆ ಇರಲಿಲ್ಲ. ರೈತರ ಭೂಮಿ ರೈತರಲ್ಲೆ ಉಳಿದಿರುವುದರಿಂದ ಆಹಾರ ಉತ್ಪನ್ನ ಇರಲು ಕಾರಣವಾಗಿದೆ. ಇದೀಗ ರೈತರ ಭೂಮಿಯನ್ನು ವಿದೇಶಿ ಕಂಪೆನಿಗಳಿಗೆ ಕಿತ್ತುಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಹೊರಟಿದೆ ಎಂದು ಟೀಕಿಸಿದರು.


ತಾಲೋಕು ರೈತ ಸಂಘದ ಅಧ್ಯಕ್ಷ ಬೊಗಮಲ್ಲೇಶ್ ಮಾತನಾಡಿ, ದೇಶದ ಒಂದು ಸಮಸ್ಯೆ ಆದರೆ ತಾಲೂಕಿನಾದ್ಯಂತ ಇರುವ ಇಲಾಖೆಗಳಲ್ಲಿ ರೈತರ ಸಮಸ್ಯೆ ಕೇಳಲು ಅಧಿಕಾರಿಗಳೇ ಇಲ್ಲದಂತಾಗಿದೆ ಇಲ್ಲಿನ ತೋಟಗಾರಿಕೆ ಇಲಾಖೆ. ವಿದ್ಯುತ್ ಇಲಾಖೆ, ತಾಲೂಕು ಕಚೇರಿ, ಕೃಷಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಅಲ್ಲಿನ ಮುಖ್ಯ ಅಧಿಕಾರಿಗಳು ಸ್ಥಳೀಯವಾಗಿ ಯಾರೂ ವಾಸ ಇಲ್ಲದಿರುವುದರಿಂದ ಇಲ್ಲಿನ ರೈತರ ಸಮಸ್ಯೆ ಕೇಳುವವರೆ ಇಲ್ಲದಂತಾಗಿದೆ. ತಾಲೂಕಿನಲ್ಲಿ ಬಗರ್ ಹುಕ್ಕುಂ ಸಮಸ್ಯೆ ಇದ್ದು, ರಿಯಲ್ ಎಸ್ಟೇಟ್ ಮಾಫಿಯ ಮೂಲಕ ರೈತರ ಒಕ್ಕಲಬ್ಬಿಸುವ ಕಾರ್ಯ ನಡೆಯುತ್ತಿದೆ ಎಂದರು.


ಜಿಲ್ಲಾ ಸಂಚಾಲಕ ಕೆ.ಎಸ್.ಬಸವರಾಜು, ತಾ.ಕಾರ್ಯದರ್ಶಿ ಮುತ್ತಗನ್ನೆ ಚಂದ್ರಶೇಖರ್ ಪ್ರಮುಖರಾದ ಮಹೇಶ್, ಮೋಕ್ಷರಾಜು ಇತರರು ಇದ್ದರು.

Post a Comment

Previous Post Next Post