ಬೇಲೂರು ದೇಗುಲಕ್ಕೆ ಭಕ್ತರಿಂದ10.93 ಲಕ್ಷ ರೂ. ಕಾಣಿಕೆ

 ಬೇಲೂರು: ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿನ ಕಾಣಿಕೆ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಯಿತು.



ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ ಹಾಗೂ ಆಗಸ್ಟ್ ೫ ನೇ ತಾರೀಖಿನವರಗೆ ಎಣಿಕೆ ಮಾಡಲಾಗಿದ್ದು 10.93 ಲಕ್ಷ ರೂ.ಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ದೇಗುಲಕ್ಕೆ ಸಮದಾಯವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದರು.

ಕಳೆದ ವರ್ಷ ಇದೆ ಅವಧಿಯಲ್ಲಿ 14 ಲಕ್ಷ ರೂ. ಕಾಣಿಕೆ ಬಂದಿತ್ತು. ಕೊರೋನ ಕಾರಣದಿಂದ ದೇಗುಲ ಲಾಕ್ ಡೌನ್ ಆಗಿದ್ದಲ್ಲದೆ ಅನ್ ಲಾಕ್ ಆದನಂತರ ಭಕ್ತರ ಆಗಮನ ಕ್ಷೀಣಿಸಿತ್ತು. 

ಇಂದಿನ ಎಣಿಕೆ ಕಾರ್ಯದಲ್ಲಿ ದೇಗುಲದ ನೌಕರರು,  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರು, ದಾಸೋಹ ನೌಕರರು ಎಣಿಕೆ ಕಾರ್ಯ ನಡೆಸಿಕೊಟ್ಟರು.

Advertisement

ಈ ಸಂದರ್ಭ ಶಾಸಕ ಕೆಎಸ್.ಲಿಂಗೇಶ್, ಪುರಸಭೆ ಮಾಜಿ ಉಪಾಧ್ಯಕ್ಷೆ ಜಯಶ್ರೀ ಗುರುರಾಜ್, ಪ್ರಮುಖರಾದ ಜೆಡಿಎಸ್ ತಾ.ಯುವ ಘಟಕದ ಅಧ್ಯಕ್ಷ ಉಮೇಶ್, ಸೌಮ್ಯ ಇತರರು ಇದ್ದರು.


Post a Comment

Previous Post Next Post