ಜಾವಗಲ್: ಹೋಬಳಿಯ ಎಸ್ ದಿಗ್ಗೇನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಡಾಂಬರು ಹಾಗೂ ಕಾಂಕ್ರೀಟ್ ರಸ್ತೆ 2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿದರು,
ನಂತರ ಮಾತನಾಡಿ ಅವರು ಈ ಗ್ರಾಮದ ಮೇಲೆ ನನಗೆ ಅಭಿಮಾನ ಇದೆ ಸಾಮನ್ಯರೈತನ ಮಗನನ್ನ ನೀವು ಶಾಸಕರಾಗಿ ಮಾಡಿದ್ದಿರಿ ನನಗೆ ಕೊಟ್ಟ ಅವಕಾಶವನ್ನು ಒಳ್ಳೆಯ ಸದುದ್ದೇಶಕ್ಕೆ ಬಳಸಿ ಇಡಿ ಹೋಬಳಿಯ ಯಾವುದೇ ಹಳ್ಳಿಗಳನ್ನು ಬಿಡದೆ ಪ್ರತಿಹಳ್ಳಿಗೂ ರಸ್ತೆ ನೀರು ಈಗೆ ಅನೇಕ ಮೂಲಭೂತ ಸೌಲಭ್ಯ ಕೊಡುವಲ್ಲಿ ಯಶಸ್ವಿಯಾಗಿದ್ದು ಇನ್ನು ಎರಡು ವರ್ಷ
ಅವಧಿಯಿದ್ದು ಈ ಊರಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಎ ಇ ಪ್ರಕಾಶ್ ಮಾತನಾಡಿ ಬಾಣಾವರ ರೈಲ್ವೆ ಸ್ಟೇಶನ್ ನಿಂದ ಪ್ರಾರಂಭವಾಗಿ ಕಾಮೇನಹಳ್ಳಿ ಗ್ರಾಮ ಸೇರುವ ಆಯ್ದ ಭಾಗಗಳಲ್ಲಿ 2720 ಮೀಟರ್ ಡಾಂಬಾರು ಹಾಗೂ 850 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು.ಎನ್ ಬಿ ಸೋಮಶೇಖರ ಹಾಗೂ ಜ್ಞಾನೇಶ್ ರವರಿಗೆ ಟೆಂಡರ್ ಆಗಿದ್ದು ಅತ್ಯುತ್ತಮವಾಗಿ ರಸ್ತೆ ಕಾಮಗಾರಿ ಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ಇಂಜೀನೀಯರ್ ತೀರ್ಥನಾಯಕ್ ಗುತ್ತಿಗೆದಾರರಾದ ಸೋಮಶೇಖರ , ಜ್ಞಾನೇಶ್,ಮಾಜಿ ಜಿ ಪಂ ಉಪಾಧ್ಯಕ್ಷರಾದ ರಾಂ ಪುರ ರಾಜಶೇಖರ್, ಮುಖಂಡರಾದ ಕಲ್ಲಳ್ಳಿ ನಾಗರಾಜು,ಮೊಸಳೆ ದಿನೇಶ್, ಬಾಬು, ಸಹ ರಾಜಶೇಖರ್,ತಿಮ್ಮನಹಳ್ಳಿ ವಿಜಯ್ ಕುಮಾರ್ಹಂದ್ರಾಳು ಬಸವರಾಜು ಜಾವಗಲ್ ಜೆ ಜಿ ತಿಮ್ಮೇಗೌಡ
ಗ್ರಾ ಪಂ ಉಪಾಧ್ಯಕ್ಷರಾದ ಮೀನಾಕ್ಷಿ, ಗ್ರಾ ಪಂ ಸದಸ್ಯರಾದ ರಂಗಸ್ವಾಮಿ, ವಿರೂಪಾಕ್ಷ,ಶಿವಕುಮಾರ್ ಗೀತಾ,ಕರುಣಾಕರ್ ನಟರಾಜ್ ವಿರೂಪಾಕ್ಷ ರಂಗಸ್ವಾಮಿ ಸಹಕಾರ ಸಂಘದ ನಿರ್ದೇಶಕರುಗಳಾದ ವಿಜಯಕುಮಾರ ಸಿದ್ದೇಶ್,ಕುಮಾರಸ್ವಾಮಿ ಉಪಸ್ಥಿತಿಯಿದ್ದರು.
