ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ಶಾಸಕ ಕೆ ಎಸ್ ಲಿಂಗೇಶ್ ಉದ್ಘಾಟಿಸಿದರು,

 ಜಾವಗಲ್; ಹೋಬಳಿಯ ಕೋಳಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೀಹಳ್ಳಿ ಗ್ರಾಮದ ಗಾಂಧಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಿರುವ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ಶಾಸಕ ಕೆ ಎಸ್ ಲಿಂಗೇಶ್ ಉದ್ಘಾಟಿಸಿದರು,

    ಉದ್ಘಾಟಿಸಿ ಮಾತನಾಡಿದ ಶಾಸಕರು ಸಂಮೀದಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಕೊಡುಗೆ ಅಪಾರ ಇಂತಹ ಮಹಾನ್ ವ್ಯಕ್ತಿಯ ಹೆಸರಲ್ಲಿ ನಿರ್ಮಾಣ ಗೊಂಡಿರುವ ಈ ಸಮುದಾಯ

ಭವನವನ್ನು ಗ್ರಾಮಸ್ಥರು ಒಳ್ಳೆಯ ಚಟುವಟಿಕೆಗೆ

ಬಳಸಬೇಕು ಅಂಬೇಡ್ಕರ್ ರವರ  ಆದರ್ಶ ಗುಣಗಳನ್ನು  ಗ್ರಾಮದ ಯುವಕರು ಅಳವಡಿಸಿಕೊಳ್ಳಬೇಕೆಂದರು,

 ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ      ರಾಂ ಪುರ ರಾಜಶೇಖರ ಮಾತನಾಡಿ ಈ ಹಿಂದೆ ಗ್ರಾಮದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು

ಎದ್ದು ಕಾಣುತ್ತಿದ್ದವು ಲಿಂಗೇಶ ಶಾಸಕರಾದ ಮೇಲೆ

ಹೋಬಳಿಯ ಪ್ರತಿ ಹಳ್ಳಿ ಹಳ್ಳಿಗೂ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ನೀರಾವರಿ ಯೋಜನೆಗಳನ್ನು ಪ್ರತಿ ಹಳ್ಳಿಗೂ ಕೊಡುವಲ್ಲಿ

ಯಶಸ್ವಿಯಾಗಿದ್ದಾರೆಂದರು,

 ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗಿರಥಮ್ಮ, ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಗಂಗಾಧರಪ್ಪ, ಸದಸ್ಯರಾದ ಅರವಿಂದ್  ಪಿ ಡಿ ಓ ಉಮೇಶ್, ಜೆ ಡಿ ಎಸ್ ಯುವ ಮುಖಂಡರಾದ ದಿನೇಶ್, ಸಿದ್ದೇಶ್, ಮಧು ,ಉಪನ್ಯಾಸಕರಾದ ಕುಬೇರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Post a Comment

Previous Post Next Post