ಬೇಲೂರು : ಇತ್ತಿಚೆಗೆ ಸ್ವಚ್ಛ ಬೇಲೂರು ಅಭಿಯಾನದಡಿ ಹುನುಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿರುವ ವಸತಿ ನಿಲಯದ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮಸ್ಥರ ಸಹಯೋಗದೊಂದಿಗೆ ರಾಷ್ಟ್ರ ಧರ್ಮ ಸಂಘಟನೆಯು ಹಮ್ಮಿಕೊಂಡಿತ್ತು.
ಈ ಕಟ್ಟಡವನ್ನು ಗ್ರಾಮಸ್ಥರ ಸದುಪಯೋಗ ಆಗುವಂತ ಕೆಲಸ ನಡೆಯಬೇಕು ಎಂಬ ಮನವಿಯನ್ನು ಮಾಡಲಾಗಿತ್ತು ಅದಕ್ಕೆ ಸ್ಪಂದಿಸಿದ ಬೇಲೂರು ತಾಲೂಕು ದಂಡಾಧಿಕಾರಿ ಮೋಹನ್ ಕುಮಾರ್ ಅವರು ವೈದ್ಯಾಧಿಕಾರಿಗಳಾದ ನರಸೇಗೌಡರು, ತಾಲೂಕು ವೈದ್ಯಕೀಯ ಆಡಳಿತ ಅಧಿಕಾರಿಯಾದ ವಿಜಯಕುಮಾರ್ ಅವರು ಇಂದು ವಸತಿ ನಿಲಯಕ್ಕೆ ಭೇಟಿ ನೀಡಿ, ಕೋವಿಡ್ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡವನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸುವ ಬಗ್ಗೆ ಚರ್ಚಿಸಲಾಯಿತು.ಈ ಹಿಂದೆ ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬರವರು ಹಾಗೂ ಚೀಕನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸುನಿಲ್ ಅವರು ಎರಡನೆಯ ಅಲೆಯ ಸಂದರ್ಭದಲ್ಲಿ ಈ ಕಟ್ಟಡವನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

