ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭ ಹಿನ್ನಲೆ ಸಿಎಂ ಬಸವರಾಜ್ ಬೊಮ್ಮಾಯಿ ನಗರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ರು.. ಮೊದಲು ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಿಎಂ ಗಿಡ ನೆಟ್ಟು ಶಾಲಾ ಕಾಲೇಜು ಪುನಾರಂಭಕ್ಕೆ ಚಾಲನೆ ನೀಡಿದ್ರು. ಬಳಿಕ ನಿರ್ಮಲಾ ರಾಣಿ ಫ್ರೌಢ ಶಾಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಸಿಎಂ ಸಚಿವರುಗಳಾದ ಬಿ ಸಿ ನಾಗೇಶ್, ಅಶ್ವಥ್ ನಾರಾಯಣ್ ಸಾಥ್
ಸಿಎಂ ಬಸವರಾಜ್ ಬೊಮ್ಮಾಯಿಗೆ ಪ್ರಾಥಮಿಕ ಫ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ , ಸಚಿವ ಅಶ್ವಥ್ ನಾರಾಯಣ್ ಸಾಥ್ ನೀಡಿದ್ರು. ವಿದ್ಯಾರ್ಥಿಗಳಿಗೆ ಟ್ಯಾಬ್, ಪಠ್ಯ – ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ರು.
ಸ್ಕೂಲ್ ಆವರಣ ಹಾಗೂ ಮೊದಲ ದಿನದ ತರಗತಿಯಲ್ಲಿ ಕೋವಿಡ್ ಮಾರ್ಗಸೂಚಿ ಪರಿಶೀಲನೆ ನಡೆಸಿದ್ರು .. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸಿಎಂ ಪ್ರತಿ ವಿದ್ಯಾರ್ಥಿಯ ಪಠ್ಯ ಪುಸ್ತಕ ಪರಿಶೀಲನೆ ಮಾಡಿದ್ರು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳಿ ಎಂದು ಸೂಚನೆ ನೀಡಿದ್ರು .. ಇನ್ನೂ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಸಂದರ್ಭ ಮನೆಯಲ್ಲಿ ಇದ್ದು ಬೇಜಾರಾಗಿತ್ತಾ ಎಂದು ವಿದ್ಯಾರ್ಥಿಗಳನ್ನಾ ಸಿಎಂ ಪ್ರಶ್ನೆ ಮಾಡಿದ್ದು , ಆ ಸಂದರ್ಭ ವಿದ್ಯಾರ್ಥಿನಿಯೊಬ್ಬರು ಸಿಎಂ ಮುಂದೆ ಆನ್ ಲೈನ್ ಕ್ಲಾಸ್ ಸಮಸ್ಯೆ ಬಿಚ್ಚಿಟ್ಟರು..
ತಜ್ಞರು ಒಪ್ಪಿದ್ರೆ 1 ರಿಂದ 8 ನೇ ತರಗತಿ ಆರಂಭ- ಸಿಎಂ
ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲೆ ತೆರೆಯಬೇಕಿತ್ತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆರಂಭ ಮಾಡಲಾಗಿದ್ದು, ಶಿಕ್ಷಣ ಇಲಾಖೆ ಎಲ್ಲಾ ಸುರಕ್ಷತಾ ಕ್ರಮ ಕೈಗೊಂಡಿದೆ.. ಆದ್ರೆ ಕೊರೋನಾ ಗೈಡ್ ಲೈನ್ಸ್ ಪಾಲನೆ ಕಡ್ಡಾಯವಾಗಿ ಮಾಡಬೇಕಿದೆ ಎಂದ್ರು. ಇವತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸಂತಸ ಮನೆ ಮಾಡಿದ್ದು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಶಾಲೆ ಆರಂಭ ಸಹಕಾರಿ. ಶಾಲೆಯಲ್ಲಿ ಕಲಿಯುವ ಖುಷಿಯೇ ಬೇರೆಯಾಗಿದ್ದು ಕೋವಿಡ್ ಇಂದ ಮಕ್ಕಳಿಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ ಎಂದರು. 1 ರಿಂದ 8 ನೇ ತರಗತಿ ಆರಂಭಕ್ಕೂ ತಜ್ಞರ ಸಲಹೆ ಕೇಳಿದ್ದೆ.. ತಜ್ಞರು ಒಪ್ಪಿಗೆ ನೀಡಿದ್ರೆ ಆ ತರಗತಿಗಳನ್ನು ಆರಂಭ ಮಾಡೋದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
ಅಗಸ್ಟ್ ಅಂತ್ಯಕ್ಕೆ ಕೋವಿಡ್ ಟೆಕ್ನಿಕಲ್ ಕಮಿಟಿ ಸಭೆ
ಅಗಸ್ಟ್ 30 ರಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಿದೆ.. 1 ರಿಂದ 8 ನೇ ತರಗತಿ ಆರಂಭ ಹಾಗೂ ಕೋವಿಡ್ ಮೂರನೇ ಅಲೆ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.. ಆರಂಭವಾಗಿರುವ ತರಗತಿಗಳ ಸಾಧಕ ಭಾಧಕಗಳ ನಡುವೆಯು ಚರ್ಚೆ ನಡೆಯಲಿದೆ.