ಗಾಂಜಾಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ: ೨೨೦೦ ಕಿ.ಗ್ರಾ.ಗಾಂಜಾ ವಶ

 ಬೇಲೂರು:ಬಸ್ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೇಲೂರು ಪೊಲೀಸರು ಬಂಧಿಸಿದ್ದಾರೆ.

ಬೇಲೂರು ಪೊಲೀಸರು ವಶಪಡಿಸಿಕೊಂಡ ಗಾಂಜಾಸೊಪ್ಪು


ತಾಲ್ಲೂಕಿನ ಗೆಂಡೇಹಳ್ಳಿ ಸಮೀಪದ ಬಳಗುಪ್ಪೆ ಗ್ರಾಮದ ಪ್ರಸನ್ನ ಹಾಗೂ ಜಯಂರಾಂ ಇವರೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು.

ಈ ಬಗ್ಗೆ ಮಾಹಿತಿ ನೀಡಿದ ಸಿಪಿಐ ಯೋಗೇಶ್, ಆಗಸ್ಟ್ ೩೦ ರಂದು ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಗೆಂಡೇಹಳ್ಳಿ ಬಳಿ ಇರುವ ಎನ್.ನಿಡಗೋಡು ಗ್ರಾಮದ ಬಸ್ ತಂಗುದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ದೊರೆಯಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಪೊಲೀಸ್ ಜೀಪು ನೋಡಿ ಓಡಲು ಆರಂಭಿಸಿದರು. ಪೊಲೀಸರು ಆರೋಪಿಗಳನ್ನು ಸುತ್ತುವರಿದು ಹಿಡಿದಿದ್ದಾರೆ ಎಂದು ತಿಳಿಸಿದರು.


ಆರೋಪಿಗಳು ಜೀಲದಲ್ಲಿ ಇಟ್ಟುಕೊಂಡಿದ್ದ ೨೨೦೦ ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಪಿಎಸ್‌ಐ ಎಸ್.ಹೆಚ್.ಪಾಟೀಲ್, ಹೆಡ್‌ಕಾನ್ಸ್ಟೇಬಲ್ ವಿರೂಪಾಕ್ಷಪ್ಪ, ಪುಟ್ಟಸ್ವಾಮಿ ಕಾನ್ಸ್ಟೇಬಲ್‌ಗಳಾದ ಪ್ರವೀಣ್, ಚಿತ್ರೇಶ್, ಚಾಲಕ ಉಮೇಶ್ ಇವರು ಇದ್ದರೆಂದು ಮಾಹಿತಿ ನೀಡಿದರು.




Post a Comment

Previous Post Next Post