ಬೇಲೂರು : ಪ್ರಾ ಆ ಕೇಂದ್ರ ಹಗರೆ ಮತ್ತು ಅಡಗೂರು, ಸಮುದಾಯ ಶಾಸ್ತ್ರ ವಿಭಾಗ ಹಿಮ್ಸ್ ಹಾಸನ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಪ್ರಾ ಆ ಕೇಂದ್ರ ಇಲ್ಲಿ ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕಾ ಕ್ರಮವಾಗಿ ಅಪೌಷ್ಠಿಕ ಮಕ್ಕಳ ಪೋಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ತಜ್ಞರಿಂದ ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಯನ್ನಾಡಿದ ಡಾ. ಶಾಲಿನಿ. ವಿ. ಎಲ್ ಕಳೆದ ಒಂದು ತಿಂಗಳಿಂದ ಹಿಮ್ಸ್ ತರಭೇತಿ ವೈದ್ಯರ ಸಹಾಯದಿಂದ ಅರವತ್ನಾಲ್ಕು ಅಂಗನವಾಡಿಯ ಮಕ್ಕಳಿಗೆ ಅಪೌಷ್ಠಿಕತೆಯ ಬಗೆಗೆ ವಿಶೇಷ ತಪಾಸಣೆ ಮಾಡಿಸಲಾಗಿತ್ತು ಹಾಗೂ ಆ ಹಂತದಲ್ಲಿ ಪೋಷಕರಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸಲಾಗಿತ್ತು, ಇಂದು ಆ ಶಿಬಿರದಲ್ಲಿ ಪತ್ತೆಯಾದ ಅಪೌಷ್ಠಿಕ ಮಕ್ಕಳ ಪೋಷಕರಿಗೆ ಪೌಷ್ಠಿಕ ಆಹಾರದ ಬಗೆಗೆ ಮಾಹಿತಿ ನೀಡಿ, ಮಕ್ಕಳ ವೈದ್ಯರ ಸಲಹೆಯಂತೆ ಅವಶ್ಯಕ ಔಷಧ ಹಂಚಿ, ಆ ಪೋಷಕರಿಗೆ ವಿಶೇಷವಾಗಿ ಕೋವಿಡ್ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ ಎಂದರು. ಸ್ಥನ್ಯಪಾನ ಸಪ್ತಾಹದ ಅಂಗವಾಗಿ ಅದರ ಮಹತ್ವದ ಬಗೆಗೆ ಮಾಹಿತಿ ನೀಡಿದರು.
ಪೋಷಕರಿಗೆ ಅಪೌಷ್ಠಿಕತೆಗೆ ಕಾರಣ ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಅಪೌಷ್ಠಿಕತೆ , ತೂಕ, ಎತ್ತರ ಕುಪೋಷಣೆಯ ಬಗೆಗೆ ವಿಶೇಷ ಕಾರ್ಯಗಾರವನ್ನು ನಡೆಸಿ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಡಕಾಗದಂತೆ ವಹಿಯಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗೆಗೆ ಆಲೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ನಾಗೇಶ್ ತಿಳಿಸಿದರು.
![]() |
| Advertisement |
ಸಮುದಾಯ ವೈದ್ಯ ತಜ್ಞರಾದ ಡಾ. ಗಗನ್ ಪೌಷ್ಠಿಕ ಆಹಾರದ ಮಹತ್ವ ತಿಳಿಸಿ, ಮನೆಯಲ್ಲೇ ತಯಾರಿಸಬಹುದಾದ ರುಚಿಕರ ಸ್ವಸ್ಥ ಆಹಾರಗಳ ತಯಾರಿಕೆಯನ್ನು ಪ್ರದರ್ಶಿಸಿ ಅದರ ಬಗೆಗೆ ವಿವರಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೋಷಕರು ತಜ್ಞವೈದ್ಯರೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನ ಮತ್ತು ಪ್ರಶ್ನೆಗಳಿಗೆ ಉತ್ತರ ಪಡೆದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಪೌಷ್ಠಿಕ ಮಕ್ಕಳಿಗೆ ಔಷಧ ವಿತರಣೆ ಹಾಗೂ ಅವರ ತಂದೆ ತಾಯಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿಮ್ ಸಮುದಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಅಂಜನಾ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಸಿಬ್ಬಂಧಿ ಶ್ರೀಮತಿ ಮಂಗಳಮ್ಮ, ಶ್ರೀಮತಿ ಉಷಾ, ಬೇಲೂರು ತಾಲ್ಲೂಕಿನ ಎಲ್ಲಾ ಅಂಗನವಾಡಿ ಮೇಲ್ವಿಚ್ಛಾರಕರು, ಹಿಮ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು, ಹಗರೆ ಮತ್ತು ಅಡಗೂರು ವೃತ್ತದ ಆರೋಗ್ಯ ಸಿಬ್ಬಂಧಿ ಹಾಗೂ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.


