ಜಾವಗಲ್ ; ಮಹಾತ್ಮ ಗಾಂಧಿ ರಾಷ್ಟ್ರೀಯ ರೋಜಗಾರ್ ಯೋಜನೆ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಸಮುದಾಯ ಕಾಮಗಾರಿಗಳ ರೈತಬಂಧು ಯೋಜನೆಯ ಅಭಿಯಾನ ಕಾರ್ಯಕ್ರಮ ಜರುಗಿತು,
ಈ ಯೋಜನೆ ಬಗ್ಗೆ ಐ ಇ ಸಿ ಸುನೀತಾ ಮಾತನಾಡಿ ಈ ಯೋಜನೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾಬ್ ಕಾರ್ಡ ಹೊಂದಿದ ರೈತರು ಅಳವಡಿಸಿಕೊಳ್ಳಬಹುದು, ರಸಾಯನಿಕ
ಗೊಬ್ಬರ ಕ್ರಿಮಿನಾಶಕ ಬಳಕೆಯಿಂದ ತಮ್ಮ ತೋಟ ಜಮೀನುಗಳು ಫಲವತ್ತತೆ ಕಳೆದುಕೊಳ್ಳುತ್ತಿವೆ,
ಆದ್ದರಿಂದ ರೈತರು ತಮ್ಮ ಹೊಲ ಮನೆ ಹತ್ತಿರ ಎರೆಹುಳು ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಿಕೊಳ್ಳಬಹುದು ಅಲ್ಲದೆ ಜಾನುವಾರು ಕುಡಿಯುವ ನೀರಿನ ತೊಟ್ಟಿ, ಕಲ್ಯಾಣಿ ಅಭಿವೃದ್ಧಿ
ಅಂಗನವಾಡಿ, ಉದ್ಯಾನವನ, ನಮ್ಮ ಹೊಲ ನಮ್ಮ ರಸ್ತೆ ಈಗೆ ಅನೇಕ ಯೋಜನೆಗಳನ್ನು ರೂಪಿಸಲು ಗ್ರಾಮಪಂಚಾಯತಿ ಯಲ್ಲಿ ನೋಂದಾಯಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು,
ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಮಾತನಾಡಿ
ನರೇಗಾ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು ಈ ಯೋಜನೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು,
ಈ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯರಾದ ಪ್ರಭಾಕರ್,ವಿಜಯಕುಮಾರ್, ಗ್ರಾ ಪಂ ಸದಸ್ಯರಾದ
ಪರಮೇಶ್, ದೊರೆ, ಸಂತೋಷ್,ರಂಗಸ್ವಾಮಿ ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು,
