ಬೇಲೂರು ಕ್ಷೇತ್ರದ ಜಾವಗಲ್ ಹೋಬಳಿಯ ಕಟ್ಟ
ಕಡೆಯ ಗ್ರಾಮವಾದ ಗುಡ್ಡೇನಹಳ್ಳಿ ,ಕಾಮೇನಹಳ್ಳಿ
ಚಿಕ್ಕಲಿಂಗನಹಳ್ಳಿ ಗ್ರಾಮದ ಕಾಂಕ್ರೀಟ್ ರಸ್ತೆ ಹಾಗೂ
ಜೆ ಜಿ ಎಮ್ ಕಾರ್ಯಕ್ರಮಕ್ಕೆ ಶಾಸಕ ಲಿಂಗೇಶ್ ಚಾಲನೆ ನೀಡಿದರು,
ಚಾಲನೆ ನೀಡಿ ಮಾತನಾಡಿದ ಶಾಸಕರು ನಿಮ್ಮೆಲ್ಲರ
ಸಹಕಾರ ಶಾಸಕನಾಗಿ ಇಂದು ಕ್ಷೇತ್ರದ ಪ್ರತಿ ಹಳ್ಳಿ ಗೂ ಒಂದಲ್ಲ ಒಂದು ಅಭಿವೃದ್ಧಿ ಕಾರ್ಯಮಾಡಲು
ಸಹಕಾರಿಯಾಗಿದೆ ಪಕ್ಷಭೇದ, ಜಾತಿಭೇದ ಮಾಡದೆ
ಪ್ರತಿ ಹಳ್ಳಿಯಲ್ಲೂ ಒಂದಲ್ಲ ಒಂದು ಕಾಮಗಾರಿ ನಡೆದಿದೆ ಅಭಿವೃದ್ಧಿಯೇ ನಮ್ಮ ಮಂತ್ರ ಯಾವುದೇ
ಪಕ್ಷವಿರಲಿ ನಮ್ಮ ಬಳಿ ಬನ್ನಿ ನಿಮ್ಮ ಊರಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ತಿಳಿಸಿದರು,
ಎ ಇ ತೀರ್ಥನಾಯ್ಕ ಮಾತನಾಡಿ ಗ್ರಾಮದ ಪರಿಮಿತಿಯಲ್ಲಿ P R E D ಯಿಂದ 15 ಲಕ್ಷ ಕಾಂಕ್ರೀಟ್ ರಸ್ತೆ ಮೀಸಲಿರಿಸಲಾಗಿದೆ ಅಲ್ಲದೆ J J
M 34 ಲಕ್ಷದ 50 ಸಾವಿರ ಮೀಸಲಿದೆ ಗ್ರಾಮದ ಪ್ರತಿ
ಮನೆಗೂ ಹೆಚ್ ಡಿ ಪಿ ಪೈಪ್ ಅಳವಡಿಸಿ ಪ್ರತಿ ಮನೆಗೆ ಶುದ್ದ ನೀರು ಹರಿಸಲಾಗುವುದೆಂದರು
ಶೀತಲ್ ಕಂಪೆನಿಗೆ ಟೆಂಡರ್ ನೀಡಲಾಗಿದೆ ಅತ್ಯುತ್ತಮ ಗುಣಮಟ್ಟದ ರಸ್ತೆ ಮಾಡಿಸುವುದಾಗಿ
ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ವಿಮಲಾ
ನಾಗರಾಜು, ಮಾಜಿ ಜಿ ಪಂ ಉಪಾಧ್ಯಕ್ಷರಾದ ರಾಂ ಪುರ ರಾಜಶೇಖರ್,ಕಲ್ಲಳ್ಳಿ ನಾಗರಾಜು, ಜೆ ಜಿ ತಿಮ್ಮೇಗೌಡ್ರು ಗ್ರಾ ಪಂ ಸದಸ್ಯರಾದ ಆನಂದಪ್ಪ,ಪುರುಷೋತ್ತಮ, ರಂಗಸ್ವಾಮಿ,ಮುಖಂಡರಾದ ಮೊಸಳೆ ದಿನೇಶ
ಅರವಿಂದ ,ಮಧು ಸಂಕೀಹಳ್ಳಿ, ಸಿದ್ದೇಶ್, ದಿಗ್ಗೇನಹಳ್ಳಿ ಬಾಬು, ಶಿವನಂಜೇಗೌಡರು, ಜಿ ಬಿ
ಕುಮಾರ್, ಪ್ರಕಾಶ್ ನೇರ್ಲಿಗೆ ,ಎ ಇ ಉಮೇಶ್, ಪಂ. ಕಾರ್ಯದರ್ಶಿ ಚಂದ್ರಶೇಖರ್ ಸಹಕಾರ ಸಂಘದ ನಿರ್ದೇಶಕರುಗಳು
ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು