ಬೇಲೂರು ತಾಲ್ಲೂಕು ಅಡಗೂರು ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ರಾಷ್ಟ್ರಧರ್ಮ ಸಂಘಟನೆಯಿಂದ ಸ್ವಚ್ಛತಾ ಕಾರ್ಯ

 

ಬೇಲೂರು:  ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಆಂದೋಲನದಿಂದ ಪ್ರೇರಣೆಗೊಂಡು ರಾಷ್ಟ್ರಧರ್ಮ ಸಂಘಟನೆ ವತಿಯಿಂದ ಪ್ರತಿ ವಾರ ನಮ್ಮ ಬೇಲೂರು ಸ್ವಚ್ಛ ಬೇಲೂರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ಭಾನುವಾರ ಬೇಲೂರು ತಾಲೂಕಿನ ಅಡಗೂರು ಗ್ರಾಮದ ರಂಗನಾಥ ಸ್ವಾಮಿ ದೇವಾಲಯದ ಆವರಣವನ್ನು ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛಗೊಳಿಸಲಾಯಿತು. 


ಕಿಡಿಗೇಡಿಗಳು ಮದ್ಯದ ಬಾಟಲಿಗಳನ್ನು ಎಸೆದು ದೇವಾಲಯದ ಆವರಣವನ್ನು ಹಾಳು ಮಾಡಿದ್ದು, ಆ ಮದ್ಯದ ಬಾಟಲಿಗಳನ್ನು ತೆರವುಗೊಳಿಸಲಾಯಿತು. ಸ್ವಚ್ಛತಾ ಕಾರ್ಯದ ಬಳಿಕ ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕ ಸಂತೋಷ್ ಕೆಂಚಾಂಬ ಅವರು ಸ್ಥಳೀಯ ಕುಂದುಕೊರತೆಗಳನ್ನು ಆಲಿಸಿದರಲ್ಲದೆ, ಸ್ವಚ್ಛತಾ ಕಾರ್ಯಕ್ಕೆ ಸಹಕರಿಸಿದ ಗ್ರಾಮದ ಜನತೆಗೆ ಧನ್ಯವಾದ ಸಲ್ಲಿಸಿದರು.





ಈ ಸಂದರ್ಭಲ್ಲಿ ಮಂಜುನಾಥ್, ಶ್ರೀನಿವಾಸ್, ಅಭಿಲಾಶ್, ಲೋಕೇಶ್, ಪ್ರದೀಪ್, ಮತ್ತು ಗ್ರಾಮಸ್ಥರು ಇದ್ದರು

Post a Comment

Previous Post Next Post