ಅರವಿಂದ್ ಬೈಕ್ ಮುಂದೆ ದಿವ್ಯಾ ಉರುಡುಗ ಸ್ಟೈಲಿಶ್ ಪೋಸ್

ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಖ್ಯಾತಿಯ ಕೆ.ಪಿ ಅರವಿಂದ್ ಬೈಕ್ ಮುಂದೆ ನಿಂತುಕೊಂಡು ದಿವ್ಯಾ ಉರುಡುಗ ಸ್ಟೈಲಿಶ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.
 
ಬಿಗ್‍ಬಾಸ್ ಸೀಸನ್-8ರ ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿದ್ದ ಜೋಡಿ ಅಂದರೆ ಅದು ಅರವಿಂದ್ ಹಾಗೂ ದಿವ್ಯಾ ಉರುಡುಗ. ದೊಡ್ಮನೆಯಲ್ಲಿ ಎಲ್ಲೆ ನೋಡಿದರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ರಿಯಾಲಿಟಿ ಶೋ ಮುಗಿದ ನಂತರ ಒಟ್ಟಿಗೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
 ಆದರೆ ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಸದ್ಯ ಇತ್ತೀಚೆಗಷ್ಟೇ ಅರವಿಂದ್ ಹಾಗೂ ದಿವ್ಯಾ ಉರುಡುಗ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ದಿವ್ಯಾ ಉರುಡುಗ ಅರವಿಂದ್ ಬೈಕ್ ಮುಂದೆ ನೊಂತು ಫೋಟೋಗೆ ಸಖತ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ.



 ಇನ್ನೂ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮಗೆ ಸರಿಯಾಗಿ ಕಂಪನಿ ಕೊಡುವವರಿದ್ದರೆ, ಪ್ರಯಾಣದ ರಸ್ತೆ ದೂರ ಎನಿಸುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಬಿಗ್‍ಬಾಸ್ ಕಾರ್ಯಕ್ರಮದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ಈ ಜೋಡಿ ಆಗಾಗ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Post a Comment

Previous Post Next Post