ಎಲ್ಲೆಲ್ಲೂ ಕರ್ನಾಟಕ ಕ್ರಶ್​ ರಶ್ಮಿಕಾದ್ದೇ ಹವಾ.. ಟ್ರೋಲ್​​ಗಳಿಂದಲೂ ಟ್ರೆಂಡಿಂಗ್​​

 ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಆ ಬಳಿಕ ಸಿಕ್ಕ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿಕೊಂಡು ಸದ್ಯ ಸ್ಟಾರ್​ ನಟಿಯಾಗಿ ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಮಿಂಚಿದ್ದ ಮಂದಣ್ಣ,

 ತಮಗೆ ಲಭಿಸಿದ್ದ ಕ್ರೇಜ್​​ಅನ್ನು ದಕ್ಷಿಣ ಸಿನಿ ರಂಗಕ್ಕೆ ಮಾತ್ರ ಸಿಮೀತ ಮಾಡದೆ ಬಾಲಿವುಡ್​​​ನತ್ತ ತಮ್ಮ ದೃಷ್ಠಿ ಅರಿಸಿದ್ದರು. ಸದ್ಯ ಅವರು ಬಾಲಿವುಡ್​​​ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಟಾಲಿವುಡ್​ ಸಿನಿ ಪ್ರೇಮಿಗಳ ಹೃದಯದಲ್ಲಿ ದೊಡ್ಡ ಸಿಂಹಾಸನವನ್ನೇ ಹಾಕಿಕೊಂಡು ಕುಳಿತಿರುವ ರಶ್ಮಿಕಾಗೆ ನಿನ್ನೆಯಷ್ಟೇ ಟಿಟೌನ್​ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ರ ಪುಷ್ಪಾ ಚಿತ್ರತಂಡ ಮೊದಲ ಲುಕ್​ ಬಿಡುಗಡೆ ಮಾಡಿ ಗಿಫ್ಟ್​ ನೀಡಿತ್ತು. ಇತ್ತ ತಮ್ಮ ಸ್ಟಾರ್​ ಪಾಪ್ಯುಲರಿಟಿಯನ್ನ ಕ್ಯಾಶ್​ ಮಾಡಿಕೊಳ್ಳಲು ಮುಂದಾಗಿರೋ ರಸ್ಮಿಕಾ, ಬಾಲಿವುಡ್​ ನಟ ವಿಕ್ಕಿ ಕೌಶಲ್ ಜೊತೆ ಪುರುಷರ ಒಳಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಟನ ಒಳಉಡುಪು ನೋಡಿ ಯುವತಿ ಸಂತೋಷದಲ್ಲಿ ಮುಳುಗಿ ಹೋಗುವ ರೀತಿಯಲ್ಲಿ ನಟಿಸಿರುವ ಕುರಿತು ನೆಟ್ಟಿಗರು ಉರಿದು ಬೀಳುತ್ತಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳು ನಟಿಯ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಜಾಹೀರಾತಿನ ಕುರಿತು ಹಲವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾನದಲ್ಲಿ ಶೇರ್ ಮಾಡಿದ್ದು, ಹಣಕ್ಕಾಗಿ ಇಂತಹ ಜಾಹೀರಾತುಗಳನ್ನು ಮಾಡುವುದು ಸರಿಯಲ್ಲ. ಡಿಯರ್ ರಶ್ಮಿಕಾ ನೀವು ಮಾಡೀರೋ ಜಾಹೀರಾತು ನೋಡಿ ನಿರಾಸೆಯಾಗಿದೆ. ಇತಂಹ ಜಾಹೀರಾತಿನಲ್ಲಿ ನಟಿಸಿದ್ದೀರಿ ಎಂಬುದನ್ನು ಊಹೆ ಮಾಡಿಕೊಳ್ಳಲು ಆಗೋದಿಲ್ಲ.. ಆದರೆ ನಾನು ಏನಾದ್ರು ತಪ್ಪಾಗಿ ಮಾತನಾಡಿದ್ದರೇ ಕ್ಷಮಿಸಿ ಎಂದು ನೆಟ್ಟಿಗರೋಬ್ಬರು ಕಾಮೆಂಟ್​ ಮಾಡಿದ್ದಾರೆ. ಈ ನಡುವೆ ನಿನ್ನೆ ಬಿಡುಗಡೆಯಾಗಿರೋ ಪುಷ್ಪಾ ಸಿನಿಮಾ ಮೊದಲ ಲುಕ್​​ ಪೋಸ್ಟರ್​ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ಎರಡು ದಿನಗಳಿಂದ ಈ ಎರಡು ವಿಚಾರಗಳಿಂದ ರಶ್ಮಿಕಾರನ್ನು ನೆಟ್ಟಿಗರು ಸಖತ್​ ಟ್ರೋಲ್​ ಮಾಡ್ತಿದ್ದಾರೆ.

Post a Comment

Previous Post Next Post