ಮನೆಗಳ ಅಕ್ರಮ-ಸಕ್ರಮದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕಾನೂನು ತೊಡಕುಗಳಿಂದ ದಾಖಲಾತಿ ಸಮಸ್ಯೆ ಎದುರಿಸುತ್ತಿರುವ ನಿವೇಶನ ಮತ್ತು ಮನೆಗಳಿಗೆ ದಾಖಲೆ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಿವೇಶನ ಮತ್ತು ಮನೆ ಮಾಲೀಕರಿಗೆ ದಾಖಲು ನೀಡಲು ಎದುರಾಗಿರುವ ಸಮಸ್ಯೆ ಇತ್ಯರ್ಥಪಡಿಸಲು ಕಂದಾಯ ಸಚಿವರಿಗೆ ತಿಳಿಸಲಾಗಿದ್ದು, ಶೀಘ್ರವೇ ಕೆಲವು ನಿವೇಶನ ಮತ್ತು ಮನೆಗಳಿಗೆ ಶಾಶ್ವತ ದಾಖಲೆ ನೀಡಲಾಗುವುದು ಎಂದು ಹೇಳಿದ್ದಾರೆ.
Tags
ರಾಜ್ಯ