ವಿದ್ಯುತ್ ಇಲಾಖೆ ನಿರ್ಲಕ್ಷ ಪಾದಚಾರಿಗಳಿಗೆ ಕಿರಿ ಕಿರಿ

 ಜಾವಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಇತ್ತಿಚೆಗೆ ಕಂಬ ಮುರಿದು ಬಿದ್ದಿತ್ತು  ವಿದ್ಯುತ್ ಇಲಾಖೆಯವರು ಹೊಸ ಕಂಬ ಅಳವಡಿಸಿ  ಮುರಿದ ಕಂಬವನ್ನು ಸುಮಾರು 6 ತಿಂಗಳಿಂದ  ಅಲ್ಲೆ ಬಿಟ್ಟು ಹೋಗಿರುವುದರಿಂದ ಸಾರ್ವಜನಿಕರ ಪಾದಾಚಾರಿಗಳಿಗೆ ತೊಂದರೆ ಆಗಿರುವ ಬಗ್ಗೆ ಸಾರ್ವಜನಿಕರು ವಿದ್ಯುತ್ ಇಲಾಖೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ,

   ಈ ಬಗ್ಗೆ ಸಾರ್ವಜನಿಕರು ಮಾತನಾಡಿ  6 ತಿಂಗಳಿಂದ ಸಾಕಷ್ಟು ಭಾರಿ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ವಿಷಯ  ತಿಳಿಸಿದರುಕೂಡ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

   ವಿದ್ಯಾರ್ಥಿ ಹರೀಶ್ ಮಾತನಾಡಿ ಪ್ರತಿನಿತ್ಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶಾಲೆಗೆ ಕಾಲೇಜಿಗೆ ಇದೆ ರಸ್ತೆಯಲ್ಲಿ ನಡೆದು ಹೋಗಬೇಕು, ಅಲ್ಲದೆ ಈಗಾಗಲೇ ಎರಡರಿಂದ ಮೂರು ವಿದ್ಯಾರ್ಥಿಗಳು ಕಂಬ ಎಡವಿ ಬಿದ್ದು ಗಾಯಗಳಾಗಿವೆ ಆದರು ಕೂಡ ಇಲಾಖೆಯವರು ಮುರಿದ ಕಂಬವನ್ನು ಅಲ್ಲೆ ಬಿಟ್ಟಿರುವುದು ಬೇಸರದ ಸಂಗತಿ ಕೂಡಲೇ ಸಂಭಂದಪಟ್ಟ ಮೇಲಾಧಿಕಾರಿಗಳು ಎ ಸಿ ರೂಂ ನಲ್ಲಿಕೂತು ಕಾಲಹರಣ ಮಾಡದೇ ಸಾರ್ವಜನಿಕರ ಕುಂದು ಕೊರತೆ ಆಲಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Advertisement

Advertisement

Advertisement


Post a Comment

Previous Post Next Post