ಬೇಲೂರು:ಕೇಂದ್ರ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಸೆಪ್ಟಂಬರ್ ೨೭ ರಂದು ಕರೆ ನೀಡಿರುವ ಬೇಲೂರು ಬಂದ್‌ಗೆ ವರ್ತಕರ ಸಂಘವೂ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
![]() |
| ಬೇಲೂರಿನಲ್ಲಿ ೨೭ ರಂದು ಸಂಪೂರ್ಣ ಬಂದ್‌ಗೆ ವಿವಿಧ ಸಂಘಟನೆ ಪ್ರಮುಖರು |
ಕಳೆದ ೧೦ ತಿಂಗಳಿನಿಂದ ದೆಹಲಿಯ ಗಡಿ ಭಾಗಗಳಲ್ಲಿ ಭಾರತೀಯ ಕಿಸಾನ್ ರೈತ ಪ್ರಮುಖರು ನಡೆಸುತ್ತಿರುವ ಹೋರಾಟಕ್ಕೆ ಸೆಪ್ಟಂಬರ್ ೨೭ ಕ್ಕೆ ೧೦ ತಿಂಗಳು ಪೂರ್ಣಗೊಳ್ಳುವುದರಿಂದ ಆ ದಿನವನ್ನು ಕೇಂದ್ರ ಸರ್ಕಾರದ ವಿರೋಧಿ ದಿನವಾಗಿ ಬಂದ್ ಮೂಲಕ ದೇಶಾಧ್ಯಂತ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ರೈತ ಸಂಘದ ಪ್ರ.ಕಾರ್ಯದರ್ಶಿ ಬಳ್ಳೂರುಸ್ವಾಮಿಗೌಡ ಹೇಳಿದರು.
ಸತತ ೧೦ ತಿಂಗಳ ಹೋರಾಟ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸಿಲ್ಲ. ಜೊತೆಯಲ್ಲಿ ಬೆಲೆಏರಿಕೆ, ಕೃಷಿ ಮಸೂದೆಗಳು ಸೇರಿದಂತೆ ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಸಂಯುಕ್ತ ಕಿಸಾನ್ ಮೋರ್ಚ ಭಾರತ್‌ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಬೇಲೂರಿನಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಬೆಳಿಗ್ಗೆ ೬ ರಿಂದ ಸಂಜೆ ೬ ರವರಗೆ ಬಂದ್ ಆಚರಿಸಲಾಗುತ್ತಿದೆ. ಔಷಧಿ, ಹಾಲು, ಆಸ್ಪತ್ರೆ ತೆರೆದಿರುತ್ತವೆ ಎಂದು ತಿಳಿಸಿದರು.
ಬಂದ್ ಬೆಂಬಲಿಸಿ ವರ್ತಕರ ಸಂಘದ ಅಧ್ಯಕ್ಷ ಬಿಎನ್.ಗಿರಿಯಪ್ಪಶೆಟ್ಟಿ, ಟಿಪ್ಪುಸೇನೆಯ ನೂರ್‌ಅಹ್ಮದ್, ಇಲ್ಲಿನ ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಅಧ್ಯಕ್ಷ ಚಂದ್ರಶೇಖರ್, ಡಾ.ರಾಜ್ ಸಂಘದ ಅಧ್ಯಕ್ಷ ಬಿ.ಆರ್.ತೀರ್ಥಂಕರ್, (ಕರವೇ ಪ್ರವೀಣಶೆಟ್ಟಿಬಣದ ಬೋಜೇಗೌಡ, ನಗರಾಧ್ಯಕ್ಷ ಅರುಣಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ಎಲ್.ಲಕ್ಷö್ಮಣ್, ಜಯಕರ್ನಾಟಕ ಸಂಘಟನೆಯ ತಾ.ಅಧ್ಯಕ್ಷ ರಾಜಣ್ಣ ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು ರೈತರ ಹೋರಾಟದ ಬಗ್ಗೆ ಕಿಂಚಿತ್ತೂ ಮಾನವೀಯತೆ ಮೆರೆದಿಲ್ಲ ರೈತರ ಹಕ್ಕುಬಾಧ್ಯತೆಗಳಿಗೆ ಬಂದ್ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.
