ಕಾವೇರಿಗೆ ಮತ್ತೆ ಜೀವಂತಿಕೆ ತಂದುಕೊಡುವ ಆಂದೋಲ : ವಿಜಯಕುಮಾರ್

ಜಾವಗಲ್: ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ ಹಾಗೂ ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದಾಗಿದೆ‌ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮನಹಳ್ಳಿ ವಿಜಯಕುಮಾರ್ ತಿಳಿಸಿದರು.
   ಸಮೀಪದ ನೇರ್ಲಿಗೆ ಗ್ರಾಮದಲ್ಲಿ ನಡೆದ ಕಾವೇರಿ ಕೂಗು  ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಎಲ್ಲಾ ನದಿಗಳಂತೆ ಕಾವೇರಿಯು ಕೂಡ ಅರಣ್ಯ ಪೋಷಿತ ನದಿ. ಆದರೆ ನಗರೀಕರಣ ಬೆಳೆದಂತೆಲ್ಲಾ ಅರಣ್ಯ ನಾಶವಾಗುತ್ತಿದೆ. ಭೂಮಿಯ ಜೈವಿಕಾಂಶದ ಮರುಪೂರೈಕೆಯೂ ಆಗುತ್ತಿಲ್ಲ. ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ. ಇದರಿಂದಾಗಿ ಕಾವೇರಿ ಬತ್ತಿಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾವೇರಿಗೆ ಮತ್ತೆ ಜೀವಂತಿಕೆ ತಂದುಕೊಡುವ ಆಂದೋಲನವೇ ಕಾವೇರಿ ಕೂಗು ಎಂದರು.
 ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನರಾದ ಕಲ್ಲಹಳ್ಳಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ವಿರೂಪಾಕ್ಷ, ರಂಗಸ್ವಾಮಿ, ಕಾವೇರಿ ಕೂಗು ಸ್ವಯಂ ಸೇವಕರಾದ ಶ್ರವಣಕುಮಾರ್, ಆದಿತ್ಯ, ಪ್ರವೀಣ್, ತೇಜಸ್ವಿನಿ ಮತ್ತಿತರರು ಇದ್ದರು.

Post a Comment

Previous Post Next Post