ಬೇಲೂರು : ಅಕ್ಟೋಬರ್ 2 ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹುಟ್ಟಿದ ಆಚರಣೆಯನ್ನು ನಾವು ಮತ್ತು ನಮ್ಮ ತಂಡದವರು ಸೇರಿ ಸುತ್ತಮುತ್ತಲ ಪರಿಸರ ದಲ್ಲಿ ಬಿಸಾಡಿದ ಕಸವನ್ನು ಹಾಯುವುದರ ಮೂಲಕ .ಸ್ವಚ್ಛ ಭಾರತ್ ಹಾಗೂ ಸ್ವಚ್ಚ ಬೇಲೂರು ಎಂಬ ಘೋಷವಾಕ್ಯದಡಿ ಸ್ವಚ್ಛಗೊಳಿಸಲಾಯಿತು .
ಎಲ್ಲೆಂದರಲ್ಲಿ ಬಿದ್ದಿದ್ದ ಬಾಟೆಲ್ ಗಳು ,ಚಿಕ್ಕ ಮಕ್ಕಳು ಬಳಸುವ ಪ್ಯಾಂಪರ್ಸ್ ಹಾಗೂ ಇನ್ನೂ ಮುಂತಾದ ತ್ಯಾಜ್ಯವನ್ನು ಕೈನಿಂದ ಹೆಕುವುದರ ಮೂಲಕ ಸ್ವಚ್ಛಗೊಳಿಸಲಾಯಿತು .
ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಕಲ್ಯಾಣಿಯನ್ನು ಸ್ವಚ್ಚಗೊಳಿಸಿ ,ಶ್ರೀ ಚನ್ನಕೇಶವ ಸ್ವಾಮಿ ರವರಿಗೆ ಹರಕೆಯ ರೂಪದಲ್ಲಿ ಮುಡಿ ಕೊಡಲು ಈ ಕಲ್ಯಾಣಿಗೆ ಬರುವ ಭಕ್ತರು ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಗಳನ್ನು ಅಲ್ಲೆ ಬಿಸಾಡಿ ಅರಿಶಿನ ಕುಂಕುಮ ತೆಂಗಿನಕಾಯಿ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳನ್ನು ನೀರಿನಲ್ಲಿ ಬಿಡುವ ಸಂಪ್ರದಾಯವಿದ್ದು ಮುಂದೊಂದು ದಿನ ಈ ಕಸ ಕಡ್ಡಿಗಳೆಲ್ಲ ಕಲ್ಯಾಣಿ ಒಳಗೆ ತುಂಬಿ ಜನರ ಆರೋಗ್ಯದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ .

ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಕಲ್ಯಾಣಿಯನ್ನು ಸ್ವಚ್ಚಗೊಳಿಸಿ ,ಶ್ರೀ ಚನ್ನಕೇಶವ ಸ್ವಾಮಿ ರವರಿಗೆ ಹರಕೆಯ ರೂಪದಲ್ಲಿ ಮುಡಿ ಕೊಡಲು ಈ ಕಲ್ಯಾಣಿಗೆ ಬರುವ ಭಕ್ತರು ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಗಳನ್ನು ಅಲ್ಲೆ ಬಿಸಾಡಿ ಅರಿಶಿನ ಕುಂಕುಮ ತೆಂಗಿನಕಾಯಿ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳನ್ನು ನೀರಿನಲ್ಲಿ ಬಿಡುವ ಸಂಪ್ರದಾಯವಿದ್ದು ಮುಂದೊಂದು ದಿನ ಈ ಕಸ ಕಡ್ಡಿಗಳೆಲ್ಲ ಕಲ್ಯಾಣಿ ಒಳಗೆ ತುಂಬಿ ಜನರ ಆರೋಗ್ಯದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ .ಆದ್ದರಿಂದ ದಯಮಾಡಿ ಭಕ್ತಾದಿಗಳು ಕಸ ಕಡ್ಡಿಯನ್ನು ಎಲ್ಲೆಂದರಲ್ಲಿ ಹಾಕದೆ ಪುರಸಭೆ ವತಿಯಿಂದ ಇಟ್ಟಿರುವ ಡಸ್ಟ್ ಬಿನ್ನಿಗೆ ಹಾಕಬೇಕು ನಮ್ಮ ಪರಿಸರವನ್ನು ನಾವೇ ಸ್ವಚ್ಛ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ,ನೂರ್ ಅಹ್ಮದ್ ನುಡಿದರು .



24x7ಸೋಷಿಯಲ್ ಸರ್ವಿಸ್ ಟೀಮ್ ಹಲವಾರು ವರ್ಷಗಳಿಂದ ಬೇಲೂರು ತಾಲ್ಲೂಕು ಆಡಳಿತದೊಂದಿಗೆ ಸೇರಿ ಪಟ್ಟಣದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಜನಪರ ಕೆಲಸಗಳನ್ನು ಮಾಡುತ್ತೇವೆ ನಮ್ಮ ಸೇವೆ ನಿರಂತರವಾಗಿರುತ್ತದೆ ಎಂದು ನುಡಿದರು, ಈ ಸಂದರ್ಭದಲ್ಲಿ, ಶಿಕ್ಷಕ ಸಂಪತ್ ಕೋಟೆ ಜಾಮಿಯಾ ಮಸೀದಿ ಅಧ್ಯಕ್ಷ ನಯಾಸ್ ಪಾಶ, ಮುಜೀಬ್ ಫಾಸಿಲ್, , ಮುಜಾಹಿದ್, ಮುಜಮ್ಮಿಲ್ ನಿಶಾದ್, ಅಶು, ಅಹಮದ್ ರಜಾ , ಮಾಳೆಗೆರೆ ಮಾಮು ಮಾನಸಿಕಅಸ್ವಸ್ಥ ಮಂಗಲ್ ಪಾಂಡೆ ಹಾಜರಿದ್ದರು